ಫುಟ್ಬಾಲ್ ವಿಶ್ವಕಪ್: ಪೋರ್ಚುಗಲ್‌ಗೆ ಜಯ
Update: 2018-06-20 19:46 IST
ಮಾಸ್ಕೊ, ಜೂ.20: ಫಿಫಾ ವಿಶ್ವಕಪ್ ನ 'ಬಿ' ಗುಂಪಿನ ಪಂದ್ಯದಲ್ಲಿ ಬುಧವಾರ ಮೊರಾಕ್ಕೊ ವಿರುದ್ಧ ಪೋರ್ಚುಗಲ್ 1-0 ಅಂತರದಲ್ಲಿ ಜಯ ಗಳಿಸಿದೆ.
ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (4ನೇ ನಿಮಿಷ) ದಾಖಲಿಸಿದ ಏಕೈಕ ಗೋಲಿನ ನೆರವಿನಲ್ಲಿ ಪೋರ್ಚುಗಲ್ ಜಯ ಗಳಿಸಿತು.
ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳ ನಡುವಿನ ಕಳೆದ ಪಂದ್ಯ 3-3 ಗೋಲುಗಳಿಂದ ಡ್ರಾಗೊಂಡಿತ್ತು. ರೊನಾಲ್ಡೊ ಹ್ಯಾಟ್ರಿಕ್ ಗೋಲು ದಾಖಲಿಸಿದ್ದರು. ಇದರೊಂದಿಗೆ ರೊನಾಲ್ಡೊ 2 ಪಂದ್ಯಗಳಲ್ಲಿ ದಾಖಲಿಸಿರುವ ಗೋಲುಗಳ ಸಂಖ್ಯೆ 4ಕ್ಕೆ ಏರಿದೆ. ಅವರು ದಾಖಲಿಸಿದ ಅಂತರಾಷ್ಟ್ರೀಯ ಗೋಲುಗಳ ಸಂಖ್ಯೆ 85 ಕ್ಕೇರಿದೆ.