ಮಂಗಳೂರು ಬಿಷಪ್ ರೆ.ಫಾ. ಅಲೋಶಿಯಸ್ ಪೌಲ್ ಡಿಸೋಜರ ಹುಟ್ಟುಹಬ್ಬ ಆಚರಣೆ

Update: 2018-06-21 07:06 GMT

ಮಂಗಳೂರು, ಜೂ.21: ಬಿಷಪ್ ರೆ.ಫಾ. ಅಲೋಶಿಯಸ್ ಪೌವ್ಲ್ ಡಿಸೋಜರ 77ನೆ ಹುಟ್ಟುಹಬ್ಬವನ್ನು ನಗರದ ರೊಸಾರಿಯೊ ಕೆಥಡ್ರಲ್‌ನಲ್ಲಿ ಗುರುವಾರ ಆಚರಿಸಲಾಯಿತು.

ಇಂದು ಬೆಳಗ್ಗೆ ಬಲಿ ಪೂಜೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ರೊಸಾರಿಯೊ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ. ಜೆ.ಬಿ. ಕ್ರಾಸ್ತಾರವರು ಬಿಷಪ್‌ರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ನೆಲ್ಸನ್ ಅಲ್ಮೇಡಾ ಪ್ರವಚನ ನೀಡಿದರು.

ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಫಾ. ಡೆನ್ನಿಸ್ ಮೊರಾಸ್ ಪ್ರಭು, ಎಪಿಸ್ಕೋಪಲ್ ವಿಕಾರ್ ಡಾ.ಫಾ. ಪಿಯುಸ್ ಡಿಸೋಜಾ, ಜುಡಿಶಿಯಲ್ ವಿಕಾರ್ ಫಾ. ವಾಲ್ಟರ್ ಡಿಮೆಲ್ಲೋ, ಧರ್ಮಪ್ರಾಂತ್ಯದ ಚಾನ್ಸೆಲರ್ ಫಾ. ಹೆನ್ರಿ ಡಿಸೋಜಾ, ಮಂಗಳೂರು ಡಯಸಿಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಪಿ. ನೊರೊನ್ನಾ, ಸೈಂಟ್ ಆ್ಯಂಟನಿ ಆಶ್ರಮದ ನಿರ್ದೇಶಕ ಫಾ. ಓನಿಲ್ ಡಿಸೋಜ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ. ರುಡಾಲ್ಫ್ ರವಿ ಡೆಸಾ ಹಾಗೂ ಇತರ ಧರ್ಮಗುರುಗಳು, ಚರ್ಚಿನ ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಧರ್ಮ ಭಗಿನಿಯರು ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News