ಜು. 20ರಂದು ದಗಲ್‌ಬಾಜಿಲು ತುಳು ಚಲನಚಿತ್ರ ತೆರೆಗೆ

Update: 2018-06-21 09:08 GMT

ಮಂಗಳೂರು, ಜೂ.21: ಅನುಗ್ರಹ ಫಿಲಂಸ್ ಲಾಂಛನದಲ್ಲಿ ಕುಂಬ್ಳೆ ಸಂತೋಷ್ ಶೆಟ್ಟಿ ಮತ್ತು ಸ್ನೇಹಿತರಿಂದ ನಿರ್ಮಾಣವಾಗಿರುವ ದಗಲ್ ಬಾಜಿಲು ತುಳು ಚಲನಚಿತ್ರ ಜುಲೈ 20ರಂದು ತೆರೆ ಕಾಣಲಿದೆ.

ಸುದ್ದಿಗೋಷ್ಠಿಯಲ್ಲಿಂದು ಚಿತ್ರಕ್ಕೆ ಕಥೆ,- ಚಿತ್ರಕಥೆ- ಸಂಭಾಷಣೆ ಹಾಗೂ ಸಾಹಿತ್ಯ ನೀಡಿರುವ ಸುರೇಶ್ ಅಂಚನ್ ಮೂಡಬಿದ್ರೆ ಮಾಹಿತಿ ನೀಡಿದರು. ಚಿತ್ರಕ್ಕೆ ಜೋಗಿ, ಜೋಗಯ್ಯ, ದಿ ವಿಲನ್ ಚಿತ್ರಗಳಿಗೆ ಎಡಿಟಿಂಗ್ ಕಾರ್ಯ ನಿರ್ವಹಿಸಿರುವ ರಾಜ್ಯ ಪ್ರಶಸ್ತಿ ವಿಜೇತ ಶ್ರೀನಿವಾಸ್ ಪಿ. ಬಾಬು ಸಂಕಲನ ನೀಡಿದ್ದಾರೆ. ಖ್ಯಾತ ನಿರ್ದೇಶಕ ಎಂ.ಡಿ. ಶ್ರೀಧರ್ ಗರಡಿಯಲ್ಲಿ ಪಳಗಿರುವ ಎ. ಎಸ್. ಪ್ರಶಾಂತ್ ಚಿತ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದು, ಕೆ.ಎಂ. ವಿಷ್ಣುವರ್ದನ್‌ ರವರು ಕ್ಯಾಮರಾ ಕೈಚಳಕ ತೋರಿಸಿದ್ದಾರೆ. ಚಿತ್ಕ್ಕೆ ರಾಜ್ಯ ಪ್ರಶಸ್ತಿ ವಿಜೇತ ಎಸ್.ಪಿ. ಚಂದ್ರಕಾಂತ್ ಹಿನ್ನೆಲೆ ಸಂಗೀತ ಒದಗಿಸಿದ್ದು, ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಹಾಡುಗಳನ್ನು ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಅನುರಾಧ ಭಟ್, ಯಕ್ಷಧ್ರುವ ಸತೀಶ್ ಪಟ್ಲ, ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್, ನವೀನ್ ಡಿ. ಪಡೀಲ್, ಪ್ರಕಾಶ್ ಮಹಾದೇವನ್, ರೂಪಾ ಪ್ರಕಾಶ್, ಮುಹಮ್ಮದ್ ಇಕ್ಬಾಲ್, ಧನಂಜಯ ವರ್ಮ, ಸಂದೇಶ್ ಬಾಬು ಹಾಡಿದ್ದಾರೆ.

ನಾಯಕರಾಗಿ ವಿಘ್ನೇಶ್ ಹಾಗೂ ನಾಯಕಿಯಾಗಿ ರಶ್ಮಿಕಾ ಸಿನೆಮಾ ರಂಗ ಪ್ರವೇಶಿಸಿದ್ದಾರೆ. ಕಾಮಿಡಿ ದಿಗ್ಗಜರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು, ದೀಪಕ್ ರೈ, ಸತೀಶ್ ಬಂದಲೆ, ಉಮೇಶ್ ಮಿಜಾರು, ತಿಮ್ಮಪ್ಪ ಕುಲಾಲ್, ಸುನಿಲ್ ನೆಲ್ಲಿಗುಡ್ಡೆ, ಪ್ರಕಾಶ್ ತೂಮಿನಾಡು, ಮನೋಹರ್ ಶೆಟ್ಟಿ ನಂದಳಿಕೆ, ಮಣಿ ಕೋಟೆಬಾಗಿಲು, ಚಂದ್ರಶೇಖರ್ ಸಿದ್ಧಕಟ್ಟೆ, ವಿಜಯ ಮೈಯ್ಯ, ಪ್ರಿಯಾ ಹೆಗ್ಡೆ, ನೀಮಾರೇ, ರೂಪಾ ವರ್ಕಾಡಿ, ನಮಿತಾ ಮೊದಲಾದವರು ನಟಿಸಿದ್ದಾರೆ. 

ಚಿತ್ರವು ಮೂಡಬಿದ್ರೆ, ಮಂಗಳೂರು, ಉಡುಪಿ, ಮಣಿಪಾಲದ ಸುತ್ತಮುತ್ತ ಸತತ 35 ದಿನಗಳ ಕಾಲ ಚಿತ್ರೀಕರಣಗೊಂಡಿದೆ ಎಂದು ನಿದೇಶರ್ಕ ಎ.ಎಸ್. ಪ್ರಶಾಂತ್ ತಿಳಿಸಿದರು. ಗೋಷ್ಠಿಯಲ್ಲಿ ನಿರ್ಮಾಪಕ ಕುಂಬ್ಳೆ ಸಂತೋಷ್ ಶೆಟ್ಟಿ, ನಾಯಕ ನಟ ವ್ನಿೇಶ್, ಸಹ ನಿರ್ಮಾಪಕ ಅಣ್ಣಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News