ಯೋಗ ದಿನಾಚರಣೆ ಸಂದರ್ಭ 73ರ ವೃದ್ಧೆ ಸಾವು

Update: 2018-06-22 14:07 GMT

ಡೆಹ್ರಾಡೂನ್,ಜೂ.22: ಇಲ್ಲಿಯ ಅರಣ್ಯ ಸಂಶೋಧನಾ ಸಂಸ್ಥೆ(ಎಫ್‌ಆರ್‌ಐ) ಯ ಕ್ಯಾಂಪಸ್‌ನಲ್ಲಿ ಗುರುವಾರ ವಿಶ್ವ ಯೋಗ ದಿನಾಚರಣೆ ಸಂದರ್ಭ 73ರ ವೃದ್ಧೆಯೋರ್ವರು ಮೃತಪಟ್ಟಿದ್ದಾರೆ.

ಏಕಾಏಕಿ ಕುಸಿದು ಬಿದ್ದು ಪ್ರಜ್ಞಾಹೀನರಾಗಿದ್ದ ಸುಧಾ ಮಿಶ್ರಾ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಸ್ಥಳದಲ್ಲಿ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು,ಆ್ಯಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿತ್ತು. ಪೊಲೀಸರು ಮಿಶ್ರಾರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಸಾವಿಗೆ ಕಾರಣವನ್ನು ವೈದ್ಯರಷ್ಟೇ ಹೇಳಬಲ್ಲರು ಎಂದು ಎಸ್‌ಪಿ ಪ್ರದೀಪ್ ರಾಯ್ ತಿಳಿಸಿದರು.

ಎಫ್‌ಆರ್‌ಐ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ 50,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News