ಭಾರತದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ಮನೆಯ ನೌಕರರ ಸಂಬಳ ತಿಳಿದರೆ ನೀವು ದಂಗಾಗುತ್ತೀರಿ

Update: 2018-06-23 14:36 GMT

ರಿಲಯನ್ಸ್ ಇಂಡಸ್ಟ್ರೀಸ್‌ನ ಮಾಲಿಕ ಮುಕೇಶ್ ಅಂಬಾನಿ ಅಥವಾ ಅಂಬಾನಿಗಳ ಹೆಸರು ಕೇಳದವರು ಬಹುಶಃ ಯಾರೂ ಇರಲಿಕ್ಕಿಲ್ಲ. ತಮ್ಮ ಹೆಸರು ಮತ್ತು ಸಂಪತ್ತಿನೊಂದಿಗೆ ಈ ಸಿರಿವಂತರು ತಮ್ಮ ಅತ್ಯುನ್ನತ ಜೀವನಶೈಲಿಗಳಿಗೂ ಖ್ಯಾತರಾಗಿದ್ದಾರೆ.

ಮುಕೇಶ್ ಮುಂಬೈನಲ್ಲಿ ತನ್ನ ನಿವಾಸ,27 ಮಹಡಿಗಳ ‘ಆ್ಯಂಟಿಲಾ’ವನ್ನು ನಿರ್ಮಿಸುತ್ತಿದ್ದಾಗ ಅದು ಹೇಗೆ ಕಾಣಬಹುದು ಎಂದು ಇಡೀ ವಿಶ್ವವೇ ಕಾತುರಗೊಂಡಿತ್ತು.

ಆದರೆ ಈ ಆ್ಯಂಟಿಲಾದಲ್ಲಿ ಕೆಲಸ ಮಾಡುತ್ತಿರುವವರ ಸಂಬಳಗಳು ಎಷ್ಟಿರಬಹುದು ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ? ಈ ನೌಕರರು ಪಡೆಯುತ್ತಿರುವ ಸಂಬಳಗಳ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡುತ್ತಿವೆಯಾದರೂ ಆ ಕುರಿತು ವಿವರಗಳಿಲ್ಲಿವೆ. ಅದಕ್ಕೂ ಮುನ್ನ ಮುಕೇಶ ಅಂಬಾನಿ ಮತ್ತು ಅವರ ಕುಟುಂಬವು ವಾಸವಾಗಿರುವ ಆ್ಯಂಟಿಲಾದ ಕುರಿತು ಕೆಲವು ಮಾಹಿತಿಗಳನ್ನು ಓದಿಕೊಳ್ಳಿ.

ಆ್ಯಂಟಿಲಾ ಇಂಗ್ಲೆಂಡಿನ ಬಕಿಂಗ್‌ಹ್ಯಾಂ ಅರಮನೆಯ ಬಳಿಕ ವಿಶ್ವದಲ್ಲಿಯ ಅತ್ಯಂತ ದುಬಾರಿ ನಿವಾಸಗಳಲ್ಲೊಂದಾಗಿದೆ. ಅದರ ನಿವ್ವಳ ವೌಲ್ಯ ಒಂದು ಶತಕೋಟಿ ಡಾಲರ್ (ಸುಮಾರು 6889 ಕೋ.ರೂ.) ಎಂದು ಹೇಳಲಾಗಿದ್ದು,ಸಹಜವಾಗಿಯೇ ವಿಶ್ವದಲ್ಲಿ ಅತ್ಯಂತ ದುಬಾರಿ ಖಾಸಗಿ ಆಸ್ತಿಯಾಗಿದೆ.

ಈ ಭವ್ಯ ನಿವಾಸವನ್ನು ರಿಕ್ಟರ್ ಮಾಪಕದಲ್ಲಿ 8ರಷ್ಟು ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವಂತೆ ನಿರ್ಮಿಸಲಾಗಿದೆ.

600 ನೌಕರರು ಇಲ್ಲಿದ್ದಾರೆ

ಆ್ಯಂಟಿಲಾ ಮತ್ತು ಅಂಬಾನಿ ಕುಟುಂಬದ ಸೇವೆಗಾಗಿ ಸುಮಾರು 600 ನೌಕರರು ಇದ್ದಾರೆ. ತನ್ನ ನೌಕರರಿಗೆ ವೇತನ ನೀಡುವ ಪ್ರಶ್ನೆ ಬಂದಾಗ ಮುಕೇಶ್ ಅಂಬಾನಿಯವರಲ್ಲಿ ಧಾರಾಳತನಕ್ಕೆ ಕೊರತೆಯಿಲ್ಲ. ಈ ನೌಕರರಿಗೆ ಆರಂಭದಲ್ಲಿ ಮಾಸಿಕ 6,000 ರೂ.ಗಳ ಸಂಬಳ ನೀಡಲಾಗುತ್ತಿತ್ತು ಮತ್ತು ಈಗ ಅವರು ಪ್ರತಿ ತಿಂಗಳೂ 2 ಲಕ್ಷ ರೂ.ಗೂ ಅಧಿಕ ವೇತನವನ್ನು ಎಣಿಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಇದರಲ್ಲಿ ಮಕ್ಕಳ ಶಿಕ್ಷಣ ಭತ್ಯೆಗಳು ಮತ್ತು ನೌಕರರ ಜೀವವಿಮಾ ವೆಚ್ಚಗಳೂ ಸೇರಿವೆ. ಈ ನೌಕರರಲ್ಲಿ ಇಬ್ಬರ ಮಕ್ಕಳು ಅಮೆರಿಕದಲ್ಲಿ ಓದುತ್ತಿದ್ದಾರೆ!

ಭದ್ರತಾ ಸಿಬ್ಬಂದಿಗಳ ವೇತನ

ಆ್ಯಂಟಿಲಾಕ್ಕೆ ಝಡ್ ವರ್ಗದ ಭದ್ರತೆಯನ್ನು ಒದಗಿಸಲಾಗಿದ್ದು, ಇದಕ್ಕಾಗಿ ಅಂಬಾನಿ ಕುಟುಂಬವು ಪ್ರತಿ ತಿಂಗಳು 15 ಲಕ್ಷ ರೂ.ಗಳನ್ನು ಪಾವತಿಸುತ್ತಿದೆ. ಸಿಆರ್‌ಪಿಎಫ್ ಅಂಬಾನಿಯ ಭದ್ರತೆಗಾಗಿ ತನ್ನ ಸಿಬ್ಬಂದಿಗಳನ್ನು ನಿಯೋಜಿಸಿದೆ.

ಇಷ್ಟೆಲ್ಲ ಓದಿದ ಮೇಲೆ ಆ್ಯಂಟಿಲಾದಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ನಿಜಕ್ಕೂ ಒಂದು ಬಗೆಯ ಅಸೂಯೆ ಉಂಟಾಗುತ್ತದೆ....ಅಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News