543 ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಉಸ್ತುವಾರಿ ನೇಮಕ

Update: 2018-06-24 16:58 GMT

ಹೊಸದಿಲ್ಲಿ, ಜೂ. 24: ಬಿಜೆಪಿ 543 ಲೋಕಸಭಾ ಕ್ಷೇತ್ರಗಳಲ್ಲಿ ಉಸ್ತುವಾರಿ ನಿಯೋಜಿಸಲಿದೆ ಹಾಗೂ ಮಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಸಿದ್ಧತೆ ಆರಂಭಿಸಲು ಪ್ರತಿ ರಾಜ್ಯದಲ್ಲಿ 11 ಸದಸ್ಯರ ಸಮಿತಿ ರೂಪಿಸಲಿದೆ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿಯ ಇಬ್ಬರು ನಾಯಕರು ತಿಳಿಸಿದ್ದಾರೆ.

ಲೋಕಸಭಾ ಕ್ಷೇತ್ರದ ಹೊರಗೆ ಇರಲಿರುವ ಈ ಉಸ್ತುವಾರಿ ಅಥವಾ ಪ್ರಭಾರಿ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. 11 ಸದಸ್ಯರ ಸಮಿತಿಯನ್ನು ‘ಚುನಾವ್ ತಯ್ಯಾರಿ ತೋಲಿ’ (ಚುನಾವಣಾ ಸಿದ್ಧತಾ ಗುಂಪು) ಎಂದು ಕರೆಯಲಾಗುವುದು ಹಾಗೂ ಇದು ರಾಜ್ಯಕ್ಕೆ ಸಂಬಂಧಿಸಿದ 13 ನಿರ್ದಿಷ್ಟ ಕಾರ್ಯಯೋಜನೆ ನೋಡಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಿಎಸ್‌ಪಿ ಅನುಸರಿಸುತ್ತಿರುವ ಮಾದರಿಯಂತೆ ಬಿಜೆಪಿ ಮೊದಲ ಬಾರಿಗೆ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿ ನೇಮಕ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ. ‘‘ಚುನಾವಣೆಗೆ ನಾವು ಸಿದ್ದರಾಗುತ್ತಿದ್ದೇವೆ. ಮೊದಲೇ ಸಿದ್ಧತೆ ಆರಂಭಿಸಿದರೆ, ನಮ್ಮ ಸಾಮರ್ಥ್ಯ ಹಾಗೂ ದುರ್ಬಲತೆ ಅರಿತಕೊಳ್ಳಲು ಸಾಧ್ಯವಾಗುತ್ತದೆ. 2014ಕ್ಕಿಂತ ಹೆಚ್ಚಿನ ಅಂತರದಲ್ಲಿ 2019ರ ಚುನಾವಣೆಯಲ್ಲಿ ಜಯ ಗಳಿಸಲು ಪಕ್ಷ ಬಯಸುತ್ತಿದೆ’’ಎಂದು ಅವರು ಹೇಳಿದ್ದಾರೆ.

ಮೋದಿ ಹಾಗೂ ಶಾ ಸಂಘಟನಾತ್ಮಕ ಕಾರ್ಯದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಈ ಎಲ್ಲ ಕಾರ್ಯ ಚಟುವಟಿಕೆಗಳು ಮುಂದಿನ ಸವಾಲು ಎದುರಿಸಲು ಪಕ್ಷವನ್ನು ಸದೃಢಗೊಳಿಸಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News