ರಿಯಾದ್‌ನತ್ತ ಯಮನ್‌ನಿಂದ ಹಾರಿದ 2 ಕ್ಷಿಪಣಿಗಳು : ತುಂಡರಿಸಿದ ಸೌದಿ ಅರೇಬಿಯ

Update: 2018-06-25 15:41 GMT

ರಿಯಾದ್, ಜೂ. 25: ಯಮನ್‌ನಿಂದ ಹೌದಿ ಬಂಡುಕೋರರು ಉಡಾಯಿಸಿದ ಎರಡು ಕ್ಷಿಪಣಿಗಳನ್ನು ರಿಯಾದ್‌ನಲ್ಲಿ ರವಿವಾರ ಸೌದಿ ಅರೇಬಿಯದ ವಾಯು ರಕ್ಷಣಾ ಪಡೆಗಳು ತುಂಡರಿಸಿವೆ.

ಕ್ಷಿಪಣಿಗಳನ್ನು ತಡೆಗಟ್ಟುವ ಕಾರ್ಯಾಚರಣೆ ವೇಳೆ, ಸೌದಿ ರಾಜಧಾನಿ ರಿಯಾದ್‌ನ ಮನೆಗಳು ಕಂಪಿಸಿದವು ಹಾಗೂ ಈ ಸಂದರ್ಭದಲ್ಲಿ ಕನಿಷ್ಠ 6 ಭಾರೀ ಸ್ಫೋಟಗಳು ಸಂಭವಿಸಿದವು. ಆಕಾಶದಲ್ಲಿ ಪ್ರಖರ ಬೆಳಕು ಕಾಣಿಸಿತು ಹಾಗೂ ನಗರದ ಮೇಲೆ ದಟ್ಟ ಹೊಗೆ ಹರಡಿತು. ಸಾವು-ನೋವಿನ ಬಗ್ಗೆ ವರದಿಗಳು ಬಂದಿಲ್ಲ.

ಕ್ಷಿಪಣಿಗಳು ರಕ್ಷಣಾ ಸಚಿವಾಲಯಕ್ಕೆ ಅಪ್ಪಳಿಸಿದೆ ಎಂಬ ವರದಿಗಳನ್ನು ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮಿತ್ರಪಡೆಗಳ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ನಿರಾಕರಿಸಿದ್ದಾರೆ.

ರಿಯಾದ್ ಹಾಗೂ ಯಮನ್ ಗಡಿಗೆ ಸಮೀಪದಲ್ಲಿರುವ ದಕ್ಷಿಣದ ನಗರಗಳಾದ ಜಝನ್ ಮತ್ತು ನಜ್ರನ್‌ನಲ್ಲಿನ ಜನವಸತಿ ಸ್ಥಳಗಳ ಮೇಲೆ ಹೌದಿ ಬಂಡುಕೋರರು ಹಲವು ತಿಂಗಳುಗಳಿಂದ ಕ್ಷಿಪಣಿಗಳನ್ನು ಹಾರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News