ಅಮೆರಿಕದ ಆರ್ಥಿಕ ದಿಗ್ಬಂಧನದ ತೂಗುಗತ್ತಿ: ಇರಾನ್ ರಿಯಾಲ್ ಮೌಲ್ಯ ಪಾತಾಳಕ್ಕೆ

Update: 2018-06-25 17:21 GMT

ದುಬೈ, ಜೂ. 25: ಅನಧಿಕೃತ ಮಾರುಕಟ್ಟೆಯಲ್ಲಿ ರವಿವಾರ ಇರಾನ್ ಕರೆನ್ಸಿ ರಿಯಾಲ್ ಡಾಲರ್ ವಿರುದ್ಧ ದಾಖಲೆಯ ಮಟ್ಟಕ್ಕೆ ಕುಸಿದಿದೆ.

ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಮೇ ತಿಂಗಳಲ್ಲಿ ಅಮೆರಿಕ ಹಿಂದೆ ಸರಿದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ಮತ್ತೆ ವಿಧಿಸಬಹುದು ಎಂಬ ಭೀತಿಯಲ್ಲಿ ಇರಾನ್ ಕರೆನ್ಸಿಯ ವಿನಿಮಯ ದರ ದಿನೇ ದಿನೇ ಕುಸಿತ ಕಾಣುತ್ತಲೇ ಇದೆ.

 ಈಗ ಒಂದು ಅಮೆರಿಕ ಡಾಲರ್ 87,000 ರಿಯಾಲ್‌ಗಳಿಗೆ ಬಿಕರಿಯಾಗುತ್ತಿದೆ. ಗುರುವಾರ ಅದು 75,500 ರಿಯಾಲ್‌ಗಳಿಗೆ ಬಿಕರಿಯಾಗುತ್ತಿತ್ತು.

ದುರ್ಬಲ ಆರ್ಥಿಕತೆ, ಸ್ಥಳೀಯ ಬ್ಯಾಂಕ್‌ಗಳಲ್ಲಿನ ಆರ್ಥಿಕ ಬಿಕ್ಕಟ್ಟುಗಳು ಹಾಗೂ ಇರಾನ್‌ನಲ್ಲಿ ಡಾಲರ್‌ಗಿರುವ ಅತಿ ಬೇಡಿಕೆಯ ಹಿನ್ನೆಲೆಯಲ್ಲಿ ಇರಾನ್ ಕರೆನ್ಸಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ

ಇರಾನ್ ಕರೆನ್ಸಿ ವೌಲ್ಯ ಕುಸಿಯುತ್ತಿದ್ದಂತೆಯೇ, ಆಮದಿತ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಬೆಲೆಯೇರಿಕೆಯ ಬಗ್ಗೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News