ಕಂಕನಾಡಿ : ಮಹಿಳೆ ನಾಪತ್ತೆ

Update: 2018-06-25 18:34 GMT

ಮಂಗಳೂರು, ಜೂ.25: ಪಕ್ಕಲಡ್ಕ ಕಂಕನಾಡಿಯ ನಿವಾಸಿ ಹರೀಶ್ ಬಜಾಳ್ ಎಂಬವರ ಪುತ್ರಿ ದೀಕ್ಷಾ (28) ಸೋಮವಾರ ನಾಪತ್ತೆಯಾಗಿದ್ದಾರೆ.

ಸೋಮವಾರ ಮಧ್ಯಾಹ್ನ ಮಾಡೂರಿನಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗುವುದಾಗಿ ತಿಳಿಸಿದ ದೀಕ್ಷಾ, ಅಲ್ಲಿಗೂ ಹೋಗದೆ, ಮನೆಗೂ ವಾಪಸಾಗದೇ ನಾಪತ್ತೆಯಾಗಿದ್ದಾರೆ.

ಈ ಕುರಿತು ಯಾರಾದೂ ಮಾಹಿತಿ ತಿಳಿದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News