ಜೂ.27ರಂದು ಭೂಮಿಯ ಅತೀ ಸಮೀಪಕ್ಕೆ ಶನಿ ಗ್ರಹ!

Update: 2018-06-26 11:14 GMT

ಮಂಗಳೂರು, ಜೂ.26: ಸೂರ್ಯನ ಸುತ್ತ ಸುತ್ತುವ ಭೂಮಿ ಮತ್ತು ಹೊರಗಿನ ಪಥದಲ್ಲಿ ಸುತ್ತುವರುವ ಶನಿ ಗ್ರಹ ಜೂ.27ರಂದು ಒಂದೇ ಸರಳರೇಖೆಯಲ್ಲಿ ಬರಲಿದ್ದು, ಅಂದು ಶನಿಗ್ರಹವು ಭೂಮಿಗೆ ಸಮೀಪದಲ್ಲಿರುತ್ತದೆ ಮತ್ತು ಪ್ರಕಾಶಮಾನವಾಗಿ ಕಂಡುಬರಲಿದೆ. ಸಾಮಾನ್ಯ ದೂರದರ್ಶಕದಿಂದ ನೋಡಿದರೂ ಅದರ ಉಂಗುರಗಳು ಮತ್ತು ಶನಿಗ್ರಹದ ಉಪಗ್ರಹಗಳಲ್ಲಿ ಒಂದಾದ ಟೈಟಾನ್ ಕಾಣಬಹುದು.

ಪೂರ್ವಾಕಾಶದಲ್ಲಿ ಆಗ್ನೇಯ ದಿಕ್ಕಿನತ್ತ ಧನು ರಾಶಿಯಲ್ಲಿ ಸುಮಾರು ರಾತ್ರಿ 8ರಿಂದ ಕಾಣಸಿಗುವ ಶನಿಗ್ರಹವು ನಂತರ ಮಧ್ಯರಾತ್ರಿಯಲ್ಲಿ ನಕ್ಷತ್ರದಂತೆ ಹೊಳೆಯುವುದನ್ನು ಕಾಣಬಹುದು. ಮಳೆ ಮೋಡಗಳ ಅಡ್ಡಿ ಇಲ್ಲದಿದ್ದರೆ ಆಸಕ್ತರು ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದೂರದರ್ಶಕದ ಮೂಲಕ ಈ ವಿದ್ಯಮಾನವನ್ನು ಕಣ್ಣು ತುಂಬಿಸಿಕೊಳ್ಳಬಹುದು ಎಂದು ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News