ಮೂಡುಬಿದಿರೆ : ಹೋಟೇಲ್ ಗೋಡೆಗೆ ಢಿಕ್ಕಿ ಹೊಡೆದ ಕಾಲೇಜು ಬಸ್

Update: 2018-06-26 13:19 GMT

ಮೂಡುಬಿದಿರೆ, ಜೂ.26: ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಖಾಸಗಿ ಹೋಟೇಲ್ ಒಂದರ ಗೋಡೆಗೆ ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯ ಬಸ್ಸೊಂದು ಮಂಗಳವಾರ ಮುಂಜಾನೆ ಢಿಕ್ಕಿ ಹೊಡೆದಿದೆ.

ವಿದ್ಯಾಗಿರಿ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದಕ್ಕೆ ಸೇರಿದ ಕಾಲೇಜು ಬಸ್ ಸಮಗಾರ ಗುಂಡಿ ಸಮೀಪದ ಕಡಿದಾದ ತಿರುವಿನಲ್ಲಿ ರಸ್ತೆಗೆ ತಾಗಿಕೊಂಡಿರುವ ಖಾಸಗಿ ಹೊಟೇಲ್‍ಗೆ ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾಲೇಜು ಬಸ್ಸ್ ನ ಮುಂಭಾಗ ಹಾನಿಗೊಳಗಾಗಿದ್ದು ಈ ವೇಳೆ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಬಸ್ಸ್ ಗೂ ಹಾನಿಯಾಗಿದೆ.

ರಸ್ತೆ ನಿಯಮ ಉಲ್ಲಂಘನೆ- ಅಫಘಾತಕ್ಕೆ ಹೇತು
ಕಾನೂನು ಪ್ರಕಾರ ರಾಷ್ಟ್ರೀಯ ಹೆದ್ದಾರಿ ಹಾಗೂ ಬಹುಮಹಡಿ ಕಟ್ಟಡದ ನಿರ್ಮಾಣದ ನಡುವೆ ನಿಯಮ ಪ್ರಕಾರ ನೀಡಬೇಕಾದ ಸ್ಥಳಾವಕಾಶ ನೀಡದೇ ರಸ್ತೆಗೆ ತಾಗಿಕೊಂಡೇ ಹೊಟೇಲ್ ನಿರ್ಮಿಸಿದ್ದರಿಂದ ಇದು ಅಫಘಾತ ವಲಯವಾಗಿ ಪರಿಣಮಿಸಿದೆ. ಅಲ್ಲೇ ತೀರ ಕಡಿದಾದ ತಿರುವು ಇರುವುದರಿಂದ ರಸ್ತೆ ಅನಾಹುತಗಳು ಹೆಚ್ಚಾಗುತ್ತಿರುವ ಬಗ್ಗೆ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಈ ಹಿಂದೆ ಪುರಸಭಾ ಸದಸ್ಯ ಕೊರಗಪ್ಪ ಪುರಸಭಾ ಅಧಿವೇಶನದಲ್ಲಿ ಮತ್ತು ಹೊಟೇಲ್‍ನವರಿಗೂ ನಿಯಮ ಉಲ್ಲಂಘಿಸಿರುವ ಬಗ್ಗೆ ಸೂಚನೆ ನೀಡಿದ್ದು ಇದಕ್ಕೂ ಹೊಟೇಲು ಮಾಲಿಕರು ಸ್ಪಂದಿಸಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News