ಆಯುರ್ವೇದ ಆರೋಗ್ಯ ಪದ್ಧತಿಗೆ ಭವಿಷ್ಯ: ರಘುಪತಿ ಭಟ್

Update: 2018-06-26 15:55 GMT

ಉಡುಪಿ, ಜೂ.26: ಆಯುರ್ವೇದವೇ ಮುಂದಿನ ಶತಮಾನದ ಆರೋಗ್ಯ ಪದ್ಧತಿ. ಅದಕ್ಕೆ ಮಾತ್ರ ಮುಂದೆ ಭವಿಷ್ಯ ಇರುವುದು. ಆ ಮೂಲಕ ಆಯುರ್ವೇದಕ್ಕೆ ವಿಶ್ವದಲ್ಲಿ ಮಾನ್ಯತೆ ದೊರೆಯಲಿದೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾ ಲಯ ಮತ್ತು ಆಸ್ಪತ್ರೆಗೆ ನವದೆಹಲಿಯ ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಸಂಸ್ಥೆಗಳ ಮೌಲ್ಯಮಾಪನಾ ಮಂಡಳಿ ನೀಡಿರುವ ಎನ್‌ಎಬಿಎಚ್ ಮಾನ್ಯತಾ ಪ್ರಮಾಣ ಪತ್ರವನ್ನು ಮಂಗಳವಾರ ಕಾಲೇಜಿನ ಭಾವಪ್ರಕಾಶ್ ಸಭಾಂಗಣದಲ್ಲಿ ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.

ಇಂದು ವಿಶ್ವವೇ ಭಾರತೀಯ ಸಂಸ್ಕೃತಿ ಕಡೆ ಆಕರ್ಷಿತವಾಗುತ್ತಿದೆ. ಈಗಾಗಲೇ ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದ್ದು, ಮುಂದೆ ಆಯುರ್ವೇದಕ್ಕೂ ಇದೇ ರೀತಿಯ ಮಾನ್ಯತೆ ಸಿಗಲಿದೆ. ಆದುದರಿಂದ ಆಯುರ್ವೇದ ಕಲಿತ ವೈದ್ಯರು ಆಯುರ್ವೇದವನ್ನೇ ಅನುಸರಿಸಿಕೊಂಡು ಅದನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ಮಾತನಾಡಿ, ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಕರ್ನಾಟಕದಲ್ಲೇ ಎನ್‌ಎಬಿಎಚ್ ಮಾನ್ಯತಾ ಪ್ರಮಾಣ ಪತ್ರ ದೊರೆತ ಮೂರನೇ ಹಾಗೂ ಕರಾವಳಿ ಕರ್ನಾಟಕದ ಏಕೈಕ ಆಯುರ್ವೇದ ಆಸ್ಪತ್ರೆಯಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದ ಗೌರವ ಪ್ರಾಧ್ಯಾ ಪಕ ಡಾ.ಮುರಳೀಧರ್ ಶರ್ಮ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶು ಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ವಹಿಸಿದ್ದರು.

ಹಿಮಾಲಯ ಡ್ರಗ್ ಕಂಪೆನಿಯು ಬಿಎಎಂಎಸ್ ಅಂತಿಮ ವರ್ಷದಲ್ಲಿ ಉತ್ತಮ ಅಂಕ ಪಡೆದ ಅಶ್ವಿನಿ ಹುಟ್ಗಿ, ರಮ್ಯಾ ಎಂ.ಅವರಿಗೆ ‘ಆಯುವಿಶಾರದ’ ಹಾಗೂ ಮಂಜುಶ್ರೀ ಬಿ. ಪಣೆಯಾಲ್ ಅವರಿಗೆ ‘ಜೀವಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಸ್ಪತ್ರೆಯ ವ್ಯವಸ್ಥಾಪಕ ಸಿ.ಶ್ರೀನಿವಾಸ ಹೆಗ್ಡೆ ವಂದಿಸಿದರು. ಉಪನ್ಯಾಸಕರಾದ ಡಾ.ಅರುಣ್ ಕುಮಾರ್ ಹಾಗೂ ಡಾ.ನಿವೇದಿಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News