ಜೂ.29ರಂದು 'ಫಾಝಿಲ್ಸ್ ಕ್ರಿಯೇಶನ್ಸ್‌'ಗೆ ಚಾಲನೆ

Update: 2018-06-27 13:02 GMT

ಮಂಗಳೂರು, ಜೂ.27: ಭಾರತದ ಅತ್ಯಂತ ಕಿರಿಯ ಸಿಇಒ ಹಾಗೂ ಉದ್ಯಮಿಗಳಲ್ಲಿ ಒಬ್ಬರಾಗಿರುವ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಮೂಸಾ ಫಾಝಿಲ್ ಅವರ ನೂತನ ಕಂಪೆನಿ ‘ಫಾಝಿಲ್ಸ್ ಕ್ರಿಯೇಶನ್ಸ್’ಗೆ ಅಧಿಕೃತ ಚಾಲನೆ ಕಾರ್ಯಕ್ರಮ ಜೂ.29ರಂದು ನಡೆಯಲಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರದ ಸುದ್ದಿಗೋಷ್ಠಿಯಲ್ಲಿ ಫಾಝಿಲ್ ಕ್ರಿಯೇಶನ್ಸ್‌ನ ಸಿಇಒ ಮೂಸಾ ಫಾಝಿಲ್ ಈ ವಿಷಯ ತಿಳಿಸಿದರು.

ಜೂ.29ರಂದು ಅಪರಾಹ್ನ 3:15ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ www.fazilscreations.com ವೆಬ್‌ಸೈಟ್, ನೂತನ ಕಂಪೆನಿ ‘ಫಾಕಾರ್ಟ್ ಡಾಟ್ ಇನ್’ (facart.in) ಲೋಗೋ ಹಾಗೂ ಕೈಪಿಡಿ ಬಿಡುಗಡೆಗೊಳ್ಳಲಿದೆ.

ವಿಶ್ವಾಸ್ ಬಾವ ಬಿಲ್ಡರ್ಸ್‌ನ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ನೂತನ ವೆಬೆಸೈಟ್ ಅನಾವರಣಗೊಳಿಸುವರು. ಆಝಾದ್ ಹಾರ್ಡ್‌ವೇರ್‌ನ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್ ಆಝಾದ್ ಅವರು ಲೋಗೋ ಅನಾವರಣಗೊಳಿಸುವರು. ಎಕ್ಸ್‌ಪರ್ಟೈಸ್ ಇಂಡಸ್ಟ್ರೀಸ್‌ನ ಆಡಳಿತ ಪಾಲುದಾರ ಮುಹಮ್ಮದ್ ಶಾವಾಝ್ ಕೈಪಿಡಿ ಬಿಡುಗೊಳಿಸಲಿರುವರು ಎಂದು ಮೂಸಾ ಫಾಝಿಲ್ ತಿಳಿಸಿದರು.

ಟಿಎನ್‌ಎಂ ಆನ್‌ಲೈನ್ ಸೊಲ್ಯೂಶನ್ಸ್‌ನ ಆಡಳಿತ ಪಾಲುದಾರ ಟಿಎನ್‌ಎಂ ಜವಾದ್ ವೀಡಿಯೊ ಕಾನ್ಫರೆನ್ಸ್ ಮೂಲಕ ಶುಭಾಶಯ ಕೋರುವರು. ಯಲೆ ಲಾಕ್ಸ್, ಮಂಗಳೂರು ಇದರ ವಿತರಕ ಕೆ.ವಿನಾಯಕ ಪ್ರಭು ಮುಖ್ಯ ಅಥಿಯಾಗಿ ಭಾಗವಹಿಸುವರು ಎಂದು ವಿವರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News