ವಳವೂರು: 'ಫತ್ಹೇ ಮುಬಾರಕ್' ಮದ್ರಸಾ ಪ್ರಾರಂಭೋತ್ಸವ ಕಾರ್ಯಕ್ರಮ

Update: 2018-06-28 11:54 GMT

ತುಂಬೆ,ಜೂ.28: ನೂರುಲ್ ಹುದಾ ಮದ್ರಸಾ ವಳವೂರು ಇದರ 'ಫತ್ಹೇ ಮುಬಾರಕ್' ಮದ್ರಸಾ ಪ್ರಾರಂಭೋತ್ಸವ ಕಾರ್ಯಕ್ರಮವು ಜೂ.24 ರಂದು ರಾತ್ರಿ ವಳವೂರು ಮದ್ರಸಾ ಸಭಾಂಗಣದಲ್ಲಿ ನಡೆಯಿತು.

ವಳವೂರು ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಅದಿ ಉಸ್ತಾದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹಲವು ಉಪದೇಶಗಳನ್ನು ನೀಡಿದರು. ಹಲವಾರು ಮಂದಿ ಗಣ್ಯ ವ್ಯಕ್ತಿಗಳು‌, ಊರಿನ ಸುನ್ನೀ ಕಾರ್ಯಕರ್ತರು ನೂರುಲ್ ಹುದಾ ಮದ್ರಸಾ‌ ಮಕ್ಕಳು, ಹಿತೈಷಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮದ್ರಸಾ ಸದರ್ ಉಸ್ತಾದರು ಸ್ವಾಗತ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News