ಸಂತ ಕಬೀರ ಸಮಾಧಿ ಸ್ಥಳದಲ್ಲಿ ಟೋಪಿ ಧರಿಸಲು ನಿರಾಕರಿಸಿದ ಆದಿತ್ಯನಾಥ್

Update: 2018-06-28 18:30 GMT

ಸಂತ ಕಬೀರನಗರ(ಉ.ಪ್ರ),ಜೂ.28: ಇಲ್ಲಿಯ ಸಂತ ಕಬೀರದಾಸರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ತನಗೆ ನೀಡಿದ್ದ ಟೋಪಿಯನ್ನು ತೊಡಲು ನಿರಾಕರಿಸಿದ್ದಾರೆ.

ಸಮಾಧಿ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗಾಗಿ ಸಿದ್ಧತೆಗಳನ್ನು ಪರಿಶೀಲಿಸಲೆಂದು ಆದಿತ್ಯನಾಥ್ ಬುಧವಾರ ಸಂಜೆ ಅಲ್ಲಿಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿಯ ಉಸ್ತುವಾರಿ ಖಾದಿಂ ಹುಸೈನ್ ಅವರು ಸಂಪ್ರದಾಯದಂತೆ ಉಣ್ಣೆಯ ಟೋಪಿಯೊಂದನ್ನು ನೀಡಿದ್ದು,ಅದನ್ನವರು ನಯವಾಗಿಯೇ ನಿರಾಕರಿಸಿದರು.

ಆದರೆ ಟೋಪಿಯನ್ನು ತನ್ನ ಬಳಿ ಇಟ್ಟುಕೊಳ್ಳಲು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ ಎಂದು ಹುಸೈನ್ ತಿಳಿಸಿದರು. 2011ರಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಸಾಮಾಜಿಕ ಸೌಹಾರ್ದತೆಗಾಗಿ ಅಹ್ಮದಾಬಾದ್‌ನಲ್ಲಿ ಉಪವಾಸ ಕೈಗೊಂಡಿದ್ದಾಗ ಮೌಲ್ವಿಯೋರ್ವರು ನೀಡಿದ್ದ ಟೋಪಿಯನ್ನು ಧರಿಸಲು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News