ಈ ದೇಶದಲ್ಲಿ ಒಂದು ಕಪ್ ಸಾಮಾನ್ಯ ಕಾಫಿಗೆ 700 ರೂ.!

Update: 2018-06-29 12:25 GMT

ಕಾರಕಾಸ್, ಜೂ. 29 : ವೆನೆಝುವೆಲಾದ ರಾಜಧಾನಿ ಕಾರಕಾಸ್ ನಲ್ಲಿ ನೀವು ಒಂದು ಕಪ್ ಕಾಫಿ ಕುಡಿಯಬೇಕಾದರೆ ಒಂದು ಮಿಲಿಯನ್ ಬೊಲಿವರ್ (700 ರೂ.) ಖರ್ಚು ಮಾಡಬೇಕು. ಅಚ್ಚರಿಯಾದರೂ ಇದು ನಿಜ.

ಎರಡು ವರ್ಷಗಳ ಹಿಂದೆ ಅಲ್ಲಿ ಒಂದು ಕಪ್ ಕಾಫಿ ಬೆಲೆ 450 ಡಾಲರ್ ಆಗಿದ್ದರೆ, ಇಂದು ಅದರ ಬೆಲೆ ಅಲ್ಲಿನ ಜನಸಾಮಾನ್ಯರ ಮಾಸಿಕ ಕನಿಷ್ಠ ವೇತನದ ಐದನೇ ಒಂದಂಶದಷ್ಟು ಸಮನಾಗಿದೆ. ಅಲ್ಲಿ ಒಂದು ಕಪ್ ಕಾಫಿ ಕುಡಿಯಲೆಂದು ನೀವು ಹೋಟೆಲಿಗೆ ಹೋದಿರೆಂದಾದರೆ ಅಲ್ಲಿನ ಅತ್ಯಂತ ಸಾಮಾನ್ಯವಾಗಿ ಉಪಯೋಗವಾಗುವ ಕರೆನ್ಸಿ- 100 ಬೊಲಿವರ್ ನ 10,000 ನೋಟುಗಳನ್ನು ನೀವು ತೆಗೆದುಕೊಂಡು ಹೋಗಬೇಕು.

ಇದು ಅಲ್ಲಿನ ಅತಿಯಾದ ಹಣದುಬ್ಬರದ ಪರಿಣಾಮ. ಅಷ್ಟಕ್ಕೂ ಡಾಲರ್ ಎದುರು ಒಂದು ಮಿಲಿಯನ್ ಬೊಲಿವರ್ ಮೌಲ್ಯ ಕೇವಲ 29 ಸೆಂಟ್ಸ್. ಸರಕಾರದ ನೋಟು ಮುದ್ರಣ ನೀತಿಯ ಅವ್ಯವಸ್ಥೆ ಹಾಗೂ ಅವರು ದೇಶವನ್ನು ಬಡತನದಲ್ಲಿ ಹೇಗೆ ಮುಳುಗಿಸುತ್ತಿದ್ದಾರೆಂಬುದನ್ನು ಇದು ಸೂಚಿಸುತ್ತದೆ.

ಕಳೆದ 12 ತಿಂಗಳುಗಳ ಅವಧಿಯಲ್ಲಿ ವೆನೆಝುವಲಾದಲ್ಲಿನ ಹಣದುಬ್ಬರ ಶೇ 43.378 ರಷ್ಟು ಹೆಚ್ಚಾಗಿದೆ. ಕಳೆದ ಮೂರು ತಿಂಗಳುಗಳ ಅವಧಿಯಲ್ಲೇ ಹಣದುಬ್ಬರ ದರ ಶೇ 4.83ರಷ್ಟು ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News