ಸ್ವಿಸ್ ಬ್ಯಾಂಕ್‌ನಲ್ಲಿರುವುದೆಲ್ಲವೂ ಕಪ್ಪು ಹಣವೆಂದು ಹೇಳಲಾಗದು ಎಂದ ಕೇಂದ್ರ ವಿತ್ತ ಸಚಿವ !

Update: 2018-06-29 14:56 GMT

ಹೊಸದಿಲ್ಲಿ, ಜೂ. 29: ವಿತ್ತವರ್ಷ 2019ರ ಅಂತ್ಯದಲ್ಲಿ ಭಾರತ ಸ್ವಿಝರ್‌ಲ್ಯಾಂಡ್‌ನಿಂದ ಕಪ್ಪು ಹಣದ ದತ್ತಾಂಶ ಪಡೆಯಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಜಮೆ ಮಾಡಿರುವ ಹಣ ಶೇ. 50 ಹೆಚ್ಚಾಗಿದ್ದು, ಅದು 7000 ಕೋ. ರೂ.ಗೂ ಅಧಿಕವಾಗಿದೆ ಎಂದು ಸ್ವಿಸ್ ನ್ಯಾಶನಲ್ ಬ್ಯಾಂಕ್ ದತ್ತಾಂಶ ಬಿಡುಗಡೆಗೊಳಿಸಿದ ಬಳಿಕ ಪಿಯೂಷ್ ಗೋಯಲ್ ಈ ಹೇಳಿಕೆ ನೀಡಿದ್ದಾರೆ. "ಯಾಕೆ ಇದು ಅಕ್ರಮ ಹಾಗೂ ಕಪ್ಪು ಹಣ ಎಂದು ಭಾವಿಸುತ್ತೀರಿ. ನಾವು ಎಲ್ಲ ಮಾಹಿತಿ ಪಡೆಯಲಿದ್ದೇವೆ. ಒಂದು ವೇಳೆ ಯಾರಾದರೂ ತಪ್ಪೆಸಗಿದ್ದರೆ, ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ" ಎಂದು ಗೋಯಲ್ ತಿಳಿಸಿದ್ದಾರೆ. ‘‘ಇಂದು ದೇಶದ ಹೊರಗೆ ಹಣ ಜಮೆ ಮಾಡಲು ಯಾರೊಬ್ಬರಿಗೂ ಧೈರ್ಯ ಇಲ್ಲ. ಇದು ಸಾಧ್ಯವಾದದ್ದು ಸರಕಾರದ ಕಠಿಣ ಶ್ರಮದಿಂದ ಮಾತ್ರ.’’ ಎಂದು ಅವರು ಹೇಳಿದರು.

ಭಾರತ ಹಾಗೂ ಇತರ ದೇಶಗಳು ನೀಡಿದ ತಪ್ಪಿತಸ್ತರ ಪುರಾವೆಗಳ ಹಿನ್ನೆಲೆಯಲ್ಲಿ ವಿದೇಶಿ ಖಾತೆದಾರರ ವಿವರಗಳನ್ನು ಹಂಚಿಕೊಳ್ಳಲು ಸ್ವಿಜರ್‌ಲ್ಯಾಂಡ್ ಈಗಾಗಲೇ ಆರಂಭಿಸಿದೆ. ನೂತನ ಒಪ್ಪಂದದಂತೆ ಕಪ್ಪು ಹಣದ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಸಹಕಾರ ವಿಸ್ತರಿಸಲು ಸ್ವಿಜರ್‌ಲ್ಯಾಂಡ್ ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ. ‘‘ಭಾರತ ಹಾಗೂ ಸ್ವಿಜರ್‌ಲ್ಯಾಂಡ್ ನಡುವೆ ಒಪ್ಪಂದದಂತೆ 2018 ಜನವರಿ 1ರಿಂದ ವಿತ್ತ ವರ್ಷದ ಅಂತ್ಯದ ವರೆಗೆ (2019 ಮಾರ್ಚ್ 31) ಎಲ್ಲ ದತ್ತಾಂಶ ಲಭ್ಯವಾಗಲಿದೆ. ಯಾಕೆ ಇದು ಅಕ್ರಮ ಹಾಗೂ ಕಪ್ಪು ಹಣ ಎಂದು ಭಾವಿಸುತ್ತೀರಿ’’ ಎಂದು ಗೋಯಲ್ ವರದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News