ಯುಎಇ ವಿಮಾನದಲ್ಲಿ ಪ್ರಯಾಣಿಸುವಾಗ ಈ 15 ವಸ್ತುಗಳುಗಳನ್ನು ಒಯ್ಯಬೇಡಿ
‘‘ಏರೋಸೋಲ್ಸ್ ಅಥವಾ ಡಿಯೋಡ್ರೆಂಟ್ ಅನ್ನು ಹ್ಯಾಂಡ್ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವೇ ?’’ ಇಂತಹ ಸ್ಪಷ್ಟ ಪ್ರಶ್ನೆಗಳನ್ನು ಬದಿಗಿರಿಸಿ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ನೀವು ಏನನ್ನು ಕೊಂಡೊಯ್ಯಲು ಸಾಧ್ಯ ಹಾಗೂ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಹ್ಯಾಂಡ್ ಬ್ಯಾಗ್‌ನಲ್ಲಿ ಎಂದಿಗೂ ಕೊಂಡೊಯ್ಯಬಾರದ ವಸ್ತುಗಳನ್ನು ಇತ್ತೀಚೆಗೆ ಸ್ಕೈಸ್ಕಾನರ್ ಪಟ್ಟಿ ಮಾಡಿದೆ. ಇತಿಹಾದ್ ಹಾಗೂ ಎಮಿರೇಟ್ಸ್‌ನಂತಹ ಯುಎಇ ಏರ್‌ಲೈನ್ಸ್‌ಗಳ ವಿಮಾನದಲ್ಲಿ ಕೊಂಡೊಯ್ಯಬಾರದ ಕೆಲವು ವಸ್ತುಗಳನ್ನು ಪಟ್ಟಿ ಮಾಡಿದೆ. ಯುಎಇಗೆ ತರುವುದಕ್ಕೆ ನಿಷೇಧ ಹೇರಲಾದ ವಸ್ತುಗಳ ಪಟ್ಟಿಗಿಂತ ಇದು ಪ್ರತ್ಯೇಕ ಎಂಬುದನ್ನು ಗುರುತಿಸಿಕೊಳ್ಳಿ. ಆದಾಗ್ಯೂ ಇವುಗಳಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಇರುವುದಾದರೂ, ದುಬೈ ಕಸ್ಟಮ್ಸ್ ಹಾಗೂ ವಿಮಾನ ನಿಲ್ದಾಣ ಪಟ್ಟಿ ಮಾಡಿದ ವಸ್ತುಗಳನ್ನು ಕೊಂಡೊಯ್ಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.
ಪೌಡರ್
2018 ಜೂನ್ 30ರಂದು ಅಮೆರಿಕ ಸಾಗಾಟ ಭದ್ರತಾ ಆಡಳಿತ ವಿಮಾನಗಳಲ್ಲಿ ಪೌಡರ್‌ಗಳನ್ನು ತೆಗೆದುಕೊಂಡು ಹೋಗುವ ಬಗೆಗಿನ ನಿಯಮ ಬದಲಾಯಿಸಿದೆ. ಈ ದಿನಾಂಕದ ಬಳಿಕ 350 ಗ್ರಾಂಗಿಂತ ಹೆಚ್ಚಿರುವ-ಸೋಡಾ ಕ್ಯಾನ್‌ಗಿಂತ ದೊಡ್ಡದಿರುವ ಪೌಡರ್‌ನಂತಹ ವಸ್ತುಗಳನ್ನು ಪರಿಶೀಲಿಸಲಾದ ಬ್ಯಾಗೇಜ್‌ನಲ್ಲಿ ಇರಿಸಬೇಕು ಹೊರತು ಹ್ಯಾಂಡ್ ಬ್ಯಾಗೇಜ್‌ನಲ್ಲಿ ಅಲ್ಲ.
ಸ್ಮಾರ್ಟ್ ಲಗ್ಗೇಜ್
ಸ್ಮಾರ್ಟ್ ಲಗೇಜ್ ಅನ್ನು ನಿರ್ವಹಿಸುವ ಕಾನೂನನ್ನು ಅಮೆರಿಕದಲ್ಲಿ 2018 ಜನವರಿಯಲ್ಲಿ ಬದಲಾಯಿಸಲಾಯಿತು. ಇದು ನೀವು ಪ್ರಯಾಣಿಸುವ ಮುನ್ನ ಏರ್‌ಲೈನ್ಸ್‌ನ ನಿಯಮಗಳನ್ನು ಪರಿಶೀಲನೆ ಮಾಡುವುದನ್ನು ಮುಖ್ಯವಾಗಿಸಿದೆ. ವಿಮಾನದಲ್ಲಿ ಬೆಂಕಿ ಉದ್ಭವಿಸಲು ಕಾರಣವಾಗಬಲ್ಲ ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆಗಳನ್ನು ನಿರ್ವಹಿಸುವ ಲಿಥಿಯಂ ಬ್ಯಾಟರಿಗಳನ್ನು ಹೊಂದಿರುವ ಸ್ಮಾರ್ಟ್ ಬ್ಯಾಗ್‌ಗಳು, ಫೋನ್ ಚಾರ್ಜರ್ ಹಾಗೂ ಇಲೆಕ್ಟ್ರಾನಿಕ್ಸ್ ಲಾಕ್‌ಗಳು.
ಶಿಶು ಆಹಾರ
ಶಿಶು ಆಹಾರ ತರುವ ಬಗ್ಗೆ ನೀವು ಎಚ್ಚರಿಕೆ ವಹಿಸುವ ಅಗತ್ಯತೆ ಇದೆ. ನೀವು ಪ್ರಯಾಣಿಸುವ ಮುನ್ನ ನಿಮ್ಮ ಆಗಮನ ಹಾಗೂ ನಿರ್ಗಮನದ ನಿರ್ವಹಣಾ ಪ್ರಾಧಿಕಾರದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ. ಇಲ್ಲದೇ ಇದ್ದರೆ ನೀವು ತೊಂದರೆಗೆ ಸಿಲುಕಬಹುದು. ಉದಾಹಣೆಗೆ ನಿಮ್ಮ ಹ್ಯಾಂಡ್ ಲಗೇಜ್‌ನಲ್ಲಿ ಶಿಶು ಆಹಾರ ಹಾಗೂ ಹಸುವಿನ ಹಾಲನ್ನು ಒಯ್ಯಲು ಇಂಗ್ಲೆಂಡ್ ಸರಕಾರ ಅವಕಾಶ ನೀಡುತ್ತದೆ. ಆದರೆ, ನಿಮ್ಮೊಂದಿಗೆ ಮಗು ಇರಬೇಕು. ಇದು ಮಗುವಿನ ಶುದ್ದೀಕರಿಸಿದ ನೀರು, ಸೋಯಾ ಹಾಲು ಹಾಗೂ ಶಿಶು ಆಹಾರಕ್ಕೆ ಕೂಡ ಅನ್ವಯವಾಗುತ್ತದೆ.
ಔಷಧ
ವಿಮಾನದಲ್ಲಿ ಔಷಧವನ್ನು ತೆಗೆದುಕೊಂಡು ಹೋಗುವಾಗ ನೀವು ತುಂಬಾ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ. ವಿಮಾನದಲ್ಲಿ ಶಿಫಾರಸು ಮಾಡಲಾದ 100 ಮಿಲ್ಲಿ ಗ್ರಾಂಗಿಂತ ಹೆಚ್ಚು ಔಷಧವನ್ನು ತೆಗೆದು ಹೋಗುವುದಾದರೆ, ಶಿಫಾರಸು (ಪ್ರಿಸ್ಕ್ರಿಪ್ಶನ್ ಚೀಟಿ)ನ್ನು ತೆಗೆದುಕೊಂಡು ಹೋಗಿ. ಒಂದು ವೇಳೆ ನೀವು ಯುಎಇಗೆ ಔಷಧ ತರುತ್ತೀರಾದರೆ, ಯುಎಇಯಲ್ಲಿ ನಿಷೇಧಿತ ಔಷಧ ಪಟ್ಟಿಯನ್ನು ಪರಿಶೀಲಿಸಿಯ ಖಚಿತಪಡಿಸಿಕೊಳ್ಳಿ. 10 ಬಾಟಲಿ ಸುಗಂದ ದ್ರವ್ಯ ಸುಗಂಧ ದ್ರವ್ಯದ ಬಾಟಲಿಯನ್ನು ನೀವು 20x20ಕ್ಕಿಂತ ಹೆಚ್ಚು ಅಳತೆಗಿಂತ ಹೆಚ್ಚು ಇಲ್ಲದ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಮಾತ್ರ ಕೊಂಡೊಯ್ಯಬಹುದು. ಇದರ ಪ್ರಮಾಣ ಎಷ್ಟಿರಬಹುದೆಂದು ನೀವೇ ಊಹಿಸಿಕೊಳ್ಳಿ.
ಕ್ರಿಕೆಟ್ ಬ್ಯಾಟ್
ವಿಮಾನದಲ್ಲಿ ಹೆಚ್ಚಿನ ಕ್ರೀಡಾ ಸಾಮಾನುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಮೀನು ಹಿಡಿಯುವ ರಾಡ್ ಮೀನು ಹಿಡಿಯುವ ರಾಡ್ ಅನ್ನು ವಿಮಾನದಲ್ಲಿ ನಿಷೇಧಿಸಲಾಗಿದೆ. ಇದೇ ನಿಯಮ ಗಾಲ್ಫ್ ಕ್ಲಬ್‌ಗಳು ಹಾಗೂ ಪೂಲ್ ಕ್ಯೂಗಳಿಗೆ ಅನ್ವಯವಾಗುತ್ತದೆ. ಡ್ರಿಲ್‌ಗಳು ಡ್ರಿಲ್, ಸ್ಕ್ರೂಡ್ರೈವರ್, ಸ್ಪಾನರ್, ಆಣಿ, ಲೇಸರ್ ಪಾಯಿಂಟರ್ ಅನ್ನು ತೆಗೆದುಕೊಂಡು ಹೋಗುವಂತಿಲ್ಲ.
ಸೂಪ್
ನಿಮ್ಮ ಕ್ಯಾಬೀನ್ ಬ್ಯಾಗೇಜ್‌ನಲ್ಲಿ ಮನೆಯಲ್ಲಿ ನಿರ್ಮಿಸಿದ ಕ್ಯಾರೇಟ್, ಕೊತ್ತಂಬರಿ ಸೊಪ್ಪಿನ ಸೂಪ್ ಒಯ್ಯುವಂತಿಲ್ಲ. 100 ಮಿ.ಲೀ. ಯ ಸೂಪ್ ಬಾಟಲಿಯನ್ನು ಕೂಡ ಕೊಂಡೊಯ್ಯುವಂತಿಲ್ಲ. ಇದೇ ನಿಯಮ ಚಟ್ನಿ ಹಾಗೂ ಜಾಮ್‌ಗೆ ಕೂಡ ಅನ್ವಯವಾಗುತ್ತದೆ.
ಪೆರೋಕ್ಸೈಡ್
ರಾಸಾಯನಿಕ ಹಾಗೂ ವಿಷಕಾರಿ ವಸ್ತುಗಳಿಗೆ ವಿಮಾನದಲ್ಲಿ ಅವಕಾಶ ಇಲ್ಲ. ಈ ನಿಯಮ ಇಲಿವಿಷ, ಪಟಾಕಿ ಹಾಗೂ ಡೈನಮೆಟ್, ಈಜುಕೊಳದಲ್ಲಿ ಬಳಸುವ ಕ್ಲೋರಿನ್, ಟಿಯರ್ ಗ್ಯಾಸ್ ಹಾಗೂ ಜೆಲ್ ಕ್ಯಾಂಡಲ್‌ಗಳಿಗೂ ಅನ್ವಯವಾಗುತ್ತದೆ. ಇಲೆಕ್ಟ್ರಾನಿಕ್ಸ್ ಸಿಗರೇಟು, ಆವಿಕಾರಕವನ್ನು ಹ್ಯಾಂಡ್ ಬ್ಯಾಗೇಜ್‌ನಲ್ಲಿ ಒಯ್ಯಲು ಹೆಚ್ಚಿನ ವಿಮಾನಗಳು ಅವಕಾಶ ನೀಡುತ್ತವೆ. ಆದುದರಿಂದ ವಿಮಾನ ಪ್ರಯಾಣ ಮಾಡುವ ಮುನ್ನ ನಿಯಮಗಳನ್ನು ಪರಿಶೀಲಿಸಿ. ಏರೋಸೆಲ್ ವೈಯುಕ್ತಿಕ ಸ್ವಚ್ಛತೆಯ ಹಿನ್ನೆಲೆಯಲ್ಲಿ ನೀವು ಡಿಯೋಡ್ರೆಂಟ್, ಹೇರ್ ಸ್ಪ್ರೇ ಅಥವಾ ಏರೋಸೋಲ್ಸ್‌ಗಳನ್ನು ನಿಮ್ಮ ಹ್ಯಾಂಡ್ ಬ್ಯಾಗೇಜ್‌ನಲ್ಲಿ ಕೊಂಡೊಯ್ಯಬಹುದು. ಆದರೆ, ಅದು 100 ಮಿ. ಲೀ. ಅಥವಾ ಅದಕ್ಕಿಂತ ಕಡಿಮೆ ಇದ್ದು, 20x20 ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಇರಿಸಿರಬೇಕು. ಅಲ್ಲದೆ ಈ ಬ್ಯಾಗ್ ಅನ್ನು ಸೀಲ್ ಮಾಡಿರಬೇಕು. ಟೆಂಟ್ ಪೆಗ್‌ಗಳು ಯುಎಇ ಕ್ಯಾಂಪ್ ಮಾಡಬಹುದಾದ ಕೇಂದ್ರ ಎಂದು ನಮಗೆ ಗೊತ್ತಿದೆ. ಆದರೆ, ನೀವು ಟೆಂಟ್ ಅನ್ನು ಕೊಂಡೊಯ್ಯುವಂತಿಲ್ಲ. ಹೆಚ್ಚಿನ ವಿಮಾನ ನಿಲ್ದಾಣಗಳು ಲೋಹದ ಮೆಟಲ್ ಟೆಂಟ್‌ಗಳನ್ನು ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ.
ಲೈಟರ್
ಅಮೆರಿಕ ಹಾಗೂ ಇಂಗ್ಲೆಂಡ್‌ಗಳಲ್ಲಿ ಇಂಧನ ಇಲ್ಲದ ಲೈಟರ್‌ಗಳನ್ನು ಪರಿಶೀಲಿಸಲಾದ ಬ್ಯಾಗೇಜ್‌ಗಳಲ್ಲಿ ಕೊಂಡೊಯ್ಯಲು ಅವಕಾಶ ಇದೆ. ಆದರೆ, ಇದು ಇಂಧನ ಹೊಂದಿದ್ದರೆ, ಕೊಂಡೊಯ್ಯಲು ಸಾಧ್ಯವಿಲ್ಲ. ಅಲ್ಲದೆ ಓರ್ವ ಒಂದು ಲೈಟರ್ ಅನ್ನು ಮಾತ್ರ ಕೊಂಡೊಯ್ಯಬಹುದು.
ಸೂಜಿ
ನೀವು ವಿಮಾನದಲ್ಲಿ ಹೆಣೆಯಲು ಸಾಧ್ಯವಿಲ್ಲ. ಯಾಕೆಂದರೆ, ಎಮಿರೇಟ್ ವಿಮಾನದಲ್ಲಿ ಹೆಣಿಗೆ ಕೊಂಡೊಯ್ಯಲು ಅವಕಾಶ ಇಲ್ಲ. ವೈದ್ಯಕೀಯ ಕಾರಣಗಳಿಗೆ ಹೊರತುಪಡಿಸಿ ಇತರ ಕಾರಣಗಳಿಗೆ ಸೂಜಿ ಕೊಂಡೊಯ್ಯುವ ಅವಕಾಶ ಇಲ್ಲ.
ಬೀಚ್‌ಬಾಲ್
ಬೀಚ್ ಬಾಲ್ ಹಾಗೂ ಗಾಳಿ ತುಂಬುವ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಆದರೆ, ಒಂದು ವಿನಾಯತಿ ಇದೆ. ಅದೆಂದರೆ ನೀವು ಗಾಳಿ ತೆಗೆದರೆ ಕೊಂಡೊಯ್ಯಬಹುದು.
ಯುಎಇಯಲ್ಲಿ ನಿಷೇಧಿತ ವಸ್ತುಗಳು ದುಬೈ ಕಸ್ಟಮ್ಸ್ ಪಟ್ಟಿ ಮಾಡಿದ, ನೀವು ಯಾವುದೇ ಸಂದರ್ಭಗಳಲ್ಲಿ ಯುಎಇಗೆ ಕೊಂಡೊಯ್ಯ ಬಾರದ ವಸ್ತುಗಳು.
ಎಲ್ಲಾ ಮಾದಕ ಪದಾರ್ಥಗಳು, ಜೂಟಾಟದ ಉಪಕರಣಗಳು, ಮೆಷಿನ್‌ಗಳು, ಆನೆದಂತ ಹಾಗೂ ಖಡ್ಗಮೃಗದ ಕೊಂಬು, ಮೂರು ಪದರ ಉಳ್ಳ ಮೀನು ಹಿಡಿಯುವ ಬಲೆ. ಖೋಟಾ ನೋಟುಗಳು.
ಉದ್ದೇಶಪೂರ್ವಕವಾಗಿ ಅನೈತಿಕತೆ ಸೂಚಿಸುವ ಅಥವಾ ಸಂಕ್ಷೋಭೆಗೆ ಕಾರಣವಾಗುವ ಇಸ್ಲಾಮಿಕ್ ಬೋಧನೆಯ ವಿವಾದಾತ್ಮಕ ಮುದ್ರಣಗಳು. ರೇಡಿಯೋಗಳು, ಸ್ವರಕ್ಷಣಾ ಉಪಕರಣ, ಹರಿತ ಅಂಚುಳ್ಳ ಚೂರಿ ಹಾಗೂ ಖಡ್ಗ. ಪಟಾಕಿ ಹಾಗೂ ಸ್ಫೋಟಕಗಳು. ಮರ, ಗಿಡ ಹಾಗೂ ಮಣ್ಣು. ಬಳಸಿದ, ಮತ್ತೆ ಸುಸ್ಥಿತಿಗೆ ತಂದ ಟಯರುಗಳು.