×
Ad

ಹಜ್ ಯಾತ್ರಾರ್ಥಿಗಳ ವಿಮಾನ ವೆಚ್ಚ 75,600 ರೂ. !

Update: 2018-07-01 19:02 IST

ಕೇಂದ್ರ ಸರಕಾರದ ಭಾರತೀಯ ಹಜ್ ಸಮಿತಿ ವತಿಯಿಂದ 2018ರ ಪವಿತ್ರ ಹಜ್ ಯಾತ್ರೆಗೆ ಭಾರತದಿಂದ 1,28,702 ಯಾತ್ರಾರ್ಥಿಗಳು ತೆರಳಲಿದ್ದು, ಇದಕ್ಕಾಗಿ ವೈಮಾನಿಕ ಸಂಸ್ಥೆಗೆ 973 ಕೋಟಿ ರೂ. ಪಾವತಿಸಲಾಗಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದು, ಈ ಅಂಕಿ ಅಂಶಗಳ ಪ್ರಕಾರ ಸಾಮಾನ್ಯ ಜನರನ್ನು ಹಜ್ ಹೆಸರಲ್ಲಿ ದೋಚುತ್ತಿರುವುದು ಬೆಳಕಿಗೆ ಬಂದಂತಾಗಿದೆ.

ಕೇಂದ್ರ ಸಚಿವರು ಬಿಡುಗಡೆಗೊಳಿಸಿರುವ ಪ್ರಕಾರ ಈ ವರ್ಷ ಪ್ರತಿಯೊಬ್ಬ ಹಜ್ ಯಾತ್ರಾರ್ಥಿಯ ವಿಮಾನ ವೆಚ್ಚಕ್ಕೆ ಸರಾಸರಿ 75,601 ರೂ. ಪಡೆಯಲಾಗುತ್ತಿದೆ. ಕಳೆದ ವರ್ಷ 82,498 ರೂ. ಪಡೆಯಲಾಗಿತ್ತು. ಹಾಗಾದರೆ ಸಬ್ಸಿಡಿ ಹೆಸರಿನಲ್ಲಿ ಸರಕಾರ ಜನರನ್ನು ಮೋಸ ಮಾಡುತ್ತಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ. ಒಬ್ಬ ಸೌದಿ ಅರೇಬಿಯಾಕ್ಕೆ ರಿಟರ್ನ್ ಟಿಕೆಟ್ ತೆಗೆದರೆ ಗರಿಷ್ಟವೆಂದರೂ 25 ರಿಂದ 30 ಸಾವಿರ ರೂ. ಆಗಬಹುದು. ಹಜ್ ಗೆ ಸರಕಾರ ಚಾರ್ಟರ್ಡ್ ವಿಮಾನ ಬುಕ್ ಮಾಡಿದರೂ ಪ್ರತಿಯೊಬ್ಬರಿಗೆ ಗರಿಷ್ಟ 40 ರಿಂದ 50 ಸಾವಿರ ಆಗಬಹುದು. ಆದರೆ ಮುಖ್ತಾರ್ ಅಬ್ಬಾಸ್ ನಖ್ವಿ ಪ್ರಕಾರ 75,601 ರೂ. ಪಡೆಯಲಾಗುತ್ತದೆ. ಇದು ಯಾತ್ರಾರ್ಥಿಗಳಿಗೆ ಮಾಡುವ ದ್ರೋಹವಾಗಿದೆ. ವೈಮಾನಿಕ ಸಂಸ್ಥೆಗೆ ಟೆಂಡರ್ ಕೊಡುವಾಗ ಹಿಂಬಾಗಿಲಲ್ಲಿ ಲಾಬಿ ನಡೆಸಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಈ ಬಾರಿ ಮಂಗಳೂರಿನಿಂದ ತೆರಳುವ ಹಜ್ ಯಾತ್ರಿಕರಿಂದ ಹಜ್ ವೀಸಾ, ವಿಮಾನ, ವಸತಿ ಹಾಗೂ ಇತರ ಖರ್ಚುವೆಚ್ಚಕ್ಕೆ ಭಾರತೀಯ ಹಜ್ ಸಮಿತಿ 2,63,450 ರೂ. (ಪ್ರಥಮ) ಹಾಗೂ 2,29,250 (ದ್ವಿತೀಯ) ಪಡೆದಿದೆ. ಒಬ್ಬನಿಗೆ ಗರಿಷ್ಟವೆಂದರೂ 1,20,000 ರೂ. (ಪ್ರಥಮ) ಹಾಗೂ 95,000 ರೂ. (ದ್ವಿತೀಯ) ಖರ್ಚಾಗಬಹುದು. ಉಳಿದ ಹಣವನ್ನು ಕೇಂದ್ರ ಸರಕಾರ ಏನು ಮಾಡುತ್ತಿದೆ ? ಜನರಿಂದ ದುಪ್ಪಟ್ಟು ಪಡೆಯುವ ಮೊತ್ತದ ವಿವರ ಹಾಗೂ ಲೆಕ್ಕವನ್ನು ಸರಕಾರ ಬಹಿರಂಗಪಡಿಸುವ ಅಗತ್ಯವಿದೆ.

Writer - ವರದಿ: ರಶೀದ್ ವಿಟ್ಲ

contributor

Editor - ವರದಿ: ರಶೀದ್ ವಿಟ್ಲ

contributor

Similar News