×
Ad

ಕೆಎಸ್‌ರಿಲೀಫ್‌ನಿಂದ ಸಿರಿಯದಲ್ಲಿ ಮಾನಸಿಕ ಚಿಕಿತ್ಸೆ ಕೇಂದ್ರ

Update: 2018-07-01 22:04 IST

ಜಿದ್ದಾ (ಸೌದಿ ಅರೇಬಿಯ), ಜು. ೧: ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್)ವು ಉತ್ತರ ಸಿರಿಯದಲ್ಲಿ ಮಾನಸಿಕ ಆರೋಗ್ಯ ಘಟಕವೊಂದನ್ನು ಸ್ಥಾಪಿಸಿದೆ ಎಂದು ಸೌದಿ ಅರೇಬಿಯದ ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.

ಅಲೆಪ್ಪೊ ಮತ್ತು ಇತರ ಪ್ರದೇಶಗಳಲ್ಲಿನ ತಮ್ಮ ಆಶ್ರಯ ಕೇಂದ್ರಗಳ ಮೇಲೆ ನಡೆದ ಬಾಂಬ್ ದಾಳಿಯಿಂದಾಗಿ ಆಸರೆ ಕಳೆದುಕೊಂಡಿರುವ ಹಾಗೂ ಮಾನಸಿಕ ಆಘಾತಕ್ಕೆ ಒಳಗಾಗಿರುವ ಜನರಿಗೆ ಈ ಘಟಕದಲ್ಲಿ ಚಿಕಿತ್ಸೆ ಕೊಡಲಾಗುವುದು.

ಈ ಯೋಜನೆಯ ಪ್ರಕಾರ, ಉತ್ತರ ಅಲೆಪ್ಪೊದ ಅಝಾಝ್ ನಗರದಲ್ಲಿ ೧೨೦೦ ಪ್ರತ್ಯಕ್ಷ ರೋಗಿಗಳು ಮತ್ತು ೭,೨೦೦ ಪರೋಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಮಾನಸಿಕ ಆರೋಗ್ಯ ರೋಗಿಗಳಿಗೆ ರಕ್ಷಣೆ ಮತ್ತು ಘನತೆಯ ಜೀವನ ಮಟ್ಟವನ್ನು ಒದಗಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News