ಈ ವಾರ ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಆರ್ಭಟ ಜೋರು: ಹವಾಮಾನ ಇಲಾಖೆ

Update: 2018-07-02 15:51 GMT

ಹೊಸದಿಲ್ಲಿ, ಜು.2: ಕರ್ನಾಟಕದ ಕರಾವಳಿ ಭಾಗ ಸೇರಿದಂತೆ ದೇಶದ ಬಹುತೇಕ ಪ್ರದೇಶಗಳಲ್ಲಿ ಈ ವಾರ ಮಳೆಯ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ವರ್ಷ ಮಾನ್ಸೂನ್ ಎಂದಿಗಿಂತ ಹದಿನೇಳು ದಿನಗಳ ಮೊದಲೇ ಇಡೀ ದೇಶವನ್ನು ವ್ಯಾಪಿಸಿದೆ ಎಂದು ಕಳೆದ ವಾರ ಹವಾಮಾನ ಇಲಾಖೆ ತಿಳಿಸಿತ್ತು.

ಕರ್ನಾಟಕದ ಕರಾವಳಿ ಭಾಗ, ಲಕ್ಷದ್ವೀಪ, ತಮಿಳುನಾಡು, ರಾಯಲಸೀಮ, ಗೋವಾ, ಕೊಂಕಣ ಪ್ರದೇಶ, ತ್ರಿಪುರ, ಮಿಝೋರಾಂ, ಮಣಿಪುರ, ನಾಗಾಲ್ಯಾಂಡ್, ಒಡಿಶಾ, ಚತ್ತೀಸ್‌ಗಡ, ಜಾರ್ಖಂಡ್, ಚಂಡೀಗಡ ಹಾಗೂ ಉತ್ತರ ಹರ್ಯಾಣದಲ್ಲಿ ಈ ವಾರ ತೀವ್ರ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಹಿಮಾಚಲ ಪ್ರದೇಶ, ಉತ್ತರ ಪ್ರದೇಶದ ಪೂರ್ವಭಾಗ ಹಾಗೂ ಅರುಣಾಚಲ ಪ್ರದೇಶದಲ್ಲಿ ಮಳೆಯ ಆರ್ಭಟ ಇನ್ನಷ್ಟು ಹೆಚ್ಚಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ. ಕರ್ನಾಟಕ ಕರಾವಳಿ ಭಾಗಗಳಲ್ಲಿ, ತಮಿಳುನಾಡು, ಗೋವಾ ಸೇರಿದಂತೆ ಹಲವೆಡೆ ಇಂದು ತೀವ್ರ ಮಳೆಯಾಗುವ ಸಾಧ್ಯತೆಯಿದೆ. ಗೋವಾ, ಮೇಘಾಲಯ ಹಾಗೂ ಅಸ್ಸಾಂನಲ್ಲಿ ಬುಧವಾರ ಕೂಡಾ ಅತೀಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News