×
Ad

ಬೆಲ್ಜಿಯಂ ಎದುರು ಸೋತ ಜಪಾನ್ ರಶ್ಯದ ಹೃದಯ ಗೆದ್ದಿದ್ದು ಹೀಗೆ...

Update: 2018-07-03 22:31 IST

2018ರ ಫುಟ್ಬಾಲ್ ವಿಶ್ವಕಪ್ ನಲ್ಲಿ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಜಪಾನ್ ಸೋತು ನಿರ್ಗಮಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಬೆಲ್ಜಿಯಂಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಜಪಾನ್ 3-2 ಗೋಲುಗಳ ಅಂತರದಲ್ಲಿ ಸೋಲನುಭವಿಸಿತು.

ರಶ್ಯಾದಲ್ಲಿ ಈ ಬಾರಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ನ ನಾಕೌಟ್ ಹಂತ ಪ್ರವೇಶಿಸಿದ ಏಷ್ಯಾದ ಏಕೈಕ ದೇಶವಾಗಿದೆ ಜಪಾನ್. ಜಪಾನ್ ನ ಪ್ರದರ್ಶನ ಒಂದೆಡೆ ಪ್ರಶಂಸೆಗೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಈ ತಂಡ ಫೀಲ್ಡ್ ನಿಂದ ಹೊರಗೆ ಮಾಡಿದ ಕೆಲಸವೊಂದು ಭಾರೀ ಮೆಚ್ಚುಗೆ ಗಳಿಸಿದೆ.

ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ್ದರಿಂದ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿದ್ದರೂ, ಸೋಲಿನ ನಿರಾಶೆಯಲ್ಲಿದ್ದರೂ ಪಂದ್ಯದ ನಂತರ ಜಪಾನ್ ಆಟಗಾರರು ತಮಗೆ ನೀಡಿದ್ದ ಲಾಕರ್ ರೂಂಗಳನ್ನು ತಾವೇ ಸ್ವಚ್ಛಗೊಳಿಸಿದ್ದಾರಲ್ಲದೆ, 'ಆತಿಥೇಯರಿಗೆ ಧನ್ಯವಾದಗಳು' ಎಂದು ಬರೆದಿದ್ದಾರೆ. ಇದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮೇಲೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಿಬ್ಬಂದಿಯಿದ್ದರೂ ಸೋಲಿನ ದುಃಖದ ನಡುವೆಯೂ ತಮಗೆ ನೀಡಿದ್ದ ಕೋಣೆಯನ್ನು ತಾವೇ ಸ್ವಚ್ಛಗೊಳಿಸಿದ್ದಲ್ಲದೆ, 'ಧನ್ಯವಾದಗಳು' ಎಂದು ಬರೆದಿರುವ ಜಪಾನ್ ಆಟಗಾರರು ನಿಜಕ್ಕೂ ಅಭಿನಂದನಾರ್ಹರು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೆ ಪಂದ್ಯ ಮುಗಿದ ಬಳಿಕ ಸ್ಟೇಡಿಯಂ ಅನ್ನು ಸ್ವಚ್ಛಗೊಳಿಸಿದ್ದ ಜಪಾನ್ ಪ್ರೇಕ್ಷಕರ ಬಗ್ಗೆಯೂ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News