ನಡಾಲ್ ಗೆಲುವಿನಾರಂಭ

Update: 2018-07-03 18:20 GMT

ಲಂಡನ್, ಜು.3: ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ಇಸ್ರೇಲ್‌ನ ಡುಡಿ ಸೆಲಾರನ್ನು 6-3, 6-3, 6-2 ಸೆಟ್‌ಗಳಿಂದ ಸೋಲಿಸಿ ವಿಂಬಲ್ಡನ್ ಟೂರ್ನಿಯಲ್ಲಿ ಮಂಗಳವಾರ ಶುಭಾರಂಭ ಮಾಡಿದ್ದಾರೆ.

 ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಜರ್ಮನಿಯ ಪೀಟರ್ ಗೊಜೊವಿಕ್‌ರನ್ನು 6-3, 6-4, 6-3 ಅಂತರದಿಂದ ಮಣಿಸಿ ಎರಡನೇ ಸುತ್ತಿಗೇರಿದರು. ಡೆಲ್ ಪೊಟ್ರೊ ಅವರು ಫೆಲಿಸಿಯಾನೊ ಲೊಪೆಝ್‌ರನ್ನು ಎದುರಿಸಲಿದ್ದಾರೆ.

ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಆಸ್ಟ್ರೇಲಿಯದ ಜೇಮ್ಸ್ ಡಕ್‌ವರ್ತ್ ರನ್ನು 7-5, 6-2 6-0 ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News