×
Ad

ಹುದೈದಾದಿಂದ 5,000 ನಾಗರಿಕರು ಏಡನ್‌ಗೆ ಪಲಾಯನ

Update: 2018-07-04 21:07 IST

ದುಬೈ, ಜು. ೪: ಯಮನ್‌ನ ಬಂದರು ನಗರ ಹುದೈದಾದಲ್ಲಿರುವ ಬಂಡುಕೋರ ನಿಯಂತ್ರಣದ ಪ್ರದೇಶಗಳಿಂದ ಕನಿಷ್ಠ 5,000 ಮಂದಿ ಏಡನ್‌ಗೆ ಪರಾರಿಯಾಗಿದ್ದಾರೆ ಎಂದು ಯಮನ್‌ನ ಹಯರ್ ರಿಲೀಫ್ ಕಮಿಟಿ ತಿಳಿಸಿದೆ ಎಂದು ‘ಅಶರ್ಕ್ ಅಲ್-ಔಸತ್’ ದೈನಿಕ ಬುಧವಾರ ವರದಿ ಮಾಡಿದೆ.

ಹುದೈದಾ ನಿವಾಸಿಗಳ ಮೇಲೆ ಹೌದಿ ಬಂಡುಕೋರರು ನಡೆಸುತ್ತಿರುವ ದಬ್ಬಾಳಿಕೆಯೇ ಇದಕ್ಕೆ ಕಾರಣ ಎಂದು ಅದು ಹೇಳಿದೆ.

ಬಂಡುಕೋರರು ನಾಗರಿಕರನ್ನು ಮಾನವ ಗುರಾಣಿಗಳನ್ನಾಗಿ ಬಳಸುತ್ತಿದ್ದಾರೆ ಹಾಗೂ ಅವರ ಮನೆಗಳನ್ನು ಸೇನಾ ಬಳಕೆಗಾಗಿ ವಶಪಡಿಸಿಕೊಂಡಿದ್ದಾರೆ ಎಂದು ಕಮಿಟಿಯ ಪ್ರಧಾನ ಸಂಯೋಜಕ ಜಮಾಲ್‌ಬಲ್ಫಾಕಿಹ್ ಹೇಳಿದ್ದಾರೆ.

ಹದ್ರಾಮೌತ್‌ನಲ್ಲಿ ೨೦೦ ಹಾಗೂ ಮಾರಿಬ್‌ನಲ್ಲಿ ೧೦೦ ಮಂದಿ ಆಶ್ರಯ ಕೋರಿದ್ದಾರೆ.

ಈ ವಲಯದಲ್ಲಿ ಯುದ್ಧವಿರಾಮ ಘೋಷಣೆಯಾದ ಹಿನ್ನೆಲೆಯಲ್ಲಿ ಜನರು ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News