×
Ad

2,999 ರೂ. ಬೆಲೆಯ 'ಜಿಯೋ ಫೋನ್ 2' ಬಿಡುಗಡೆಗೊಳಿಸಿದ ರಿಲಯನ್ಸ್

Update: 2018-07-05 15:52 IST

ಮುಂಬೈ, ಜು. 5: ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ವಾರ್ಷಿಕ ಮಹಾಸಭೆಯ ಸಂದರ್ಭ 'ಜಿಯೋ ಫೋನ್ 2' 4ಜಿ ಫೀಚರ್ ಫೋನ್ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಬಿಡುಗಡೆಗೊಳಿಸಲಾದ ಜಿಯೋ ಫೋನ್ ಗಿಂತ ಇಂದು ಬಿಡುಗಡೆಗೊಳಿಸಲಾದ ಫೋನ್ ನ ವಿನ್ಯಾಸ ಮತ್ತಿತರ ಸ್ಪೆಸಿಫಿಕೇಶನ್ ನಲ್ಲಿ ಕೆಲವೊಂದು ಬದಲಾವಣೆಗಳಿವೆ.

'ಜಿಯೋ ಫೋನ್ 2'ನಲ್ಲಿ ಕೂಡ ವಾಟ್ಸ್ಆ್ಯಪ್ ಮತ್ತು ಯು ಟ್ಯೂಬ್ ಅಪ್ಲಿಕೇಶನ್ ಉಪಯೋಗಿಸಬಹುದಾಗಿದ್ದು, ಈ ಫೋನ್ ನ ವಿನ್ಯಾಸ ಹೆಚ್ಚು ಕಡಿಮೆ ಬ್ಲ್ಯಾಕ್ ಬೆರ್ರಿ ಫೋನ್ ನಂತೆಯೇ ಇದೆ ಹಾಗೂ ಕ್ಯುವರ್ಟಿ ಕೀಪ್ಯಾಡ್ ಹೊಂದಿದೆ.

ಭಾರತೀಯ ಮಾರುಕಟ್ಟೆಗೆ ಆಗಸ್ಟ್ 15ರಂದು ಪ್ರವೇಶಿಸಲಿರುವ ಜಿಯೋ ಫೋನ್ 2 ಇದರ ಆರಂಭಿಕ ಬೆಲೆ 2,999 ರೂ. ಆಗಿದೆ. ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಜಿಯೋ ಫೋನ್ ಮಾನ್ಸೂನ್ ಹಂಗಾಮ ಆಫರ್ ಕೂಡ ಘೋಷಿಸಿದ್ದು ಗ್ರಾಹಕರು ತಮ್ಮ ಈಗಿನ ಫೀಚರ್ ಫೋನ್ ಅನ್ನು ಜಿಯೋ ಫೋನ್ ಗೆ ಕೇವಲ ರೂ 501 ಕೊಟ್ಟು ಬದಲಾಯಿಸಬಹುದಾಗಿದೆ. ಈ ಆಫರ್ ಜುಲೈ 21ರಂದು ಆರಂಭಗೊಳ್ಳಲಿದೆ.

ಜಿಯೋ ಫೋನ್ 2ರಲ್ಲಿ ಡುಯೆಲ್ ಸಿಮ್ ಸ್ಲಾಟ್ ಇದ್ದು 2.4 ಇಂಚುಗಳ ಕ್ಯುವಿಜಿಎ ಡಿಸ್ಪ್ಲೆ ಇದೆ. 512 ಎಂಬಿ ರ್ಯಾಮ್ ಹಾಗೂ 4 ಜಿಬಿ ಆಂತರಿಕ ಸ್ಟೋರೇಜ್ ಈ ಫೋನ್ ನಲ್ಲಿದ್ದು ಅದನ್ನು ಎಸ್‌ಡಿ ಕಾರ್ಡ್ ಮುಖಾಂತರ 128 ಜಿಬಿ ತನಕ ವಿಸ್ತರಿಸಬಹುದಾಗಿದೆ.

ಫೊನ್ ನಲ್ಲಿ 2 ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮರಾ ಹಾಗೂ ವಿಜಿಎ ಫ್ರಂಟ್ ಕ್ಯಾಮರಾ ಸೆನ್ಸರ್ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News