ರೈತರು ಬೇಸಿಗೆ ಬೆಳೆ ಬೆಳೆಯುವುದನ್ನು ನಿಷೇಧಿಸಿದ ಇರಾಕ್ !

Update: 2018-07-05 16:47 GMT

ಬಗ್ದಾದ್, ಜು. 5: ಇರಾಕ್ ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದ್ದು, ಈ ವರ್ಷ ರೈತರು ಬೇಸಿಗೆ ಬೆಳೆಗಳನ್ನು ಬೆಳೆಯುವುದನ್ನು ಇರಾಕ್ ನಿಷೇಧಿಸಿದೆ.

ದಿನೇ ದಿನೇ ಹೆಚ್ಚುತ್ತಿರುವ ಉಷ್ಣತೆ ಮತ್ತು ಅತೃಪ್ತಿದಾಯಕ ಮಳೆಯಿಂದಾಗಿ ಈ ವರ್ಷ ದೇಶದ ಕೃಷಿ ಭೂಮಿಯ ಅರ್ಧದಷ್ಟಕ್ಕೆ ಮಾತ್ರ ನೀರುಣಿಸಲು ಸಾಧ್ಯವಾಗುತ್ತದೆ ಎಂದು ಇರಾಕ್‌ನ ಜಲ ಸಂಪನ್ಮೂಲ ಸಚಿವಾಲಯದ ಸಲಹೆಗಾರ ಜಾಫರ್ ಅಬ್ದುಲ್ಲಾ ಹೇಳಿದ್ದಾರೆ.

ಆದರೆ, ನೀರು ನಿರ್ವಹಣೆ ಮತ್ತು ನೀರಾವರಿಯನ್ನು ಆಧುನೀಕರಿಸುವಲ್ಲಿ ಸರಕಾರ ವಿಫಲವಾಗಿರುವುದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ರೈತರು ಆರೋಪಿಸುತ್ತಾರೆ.

ನೆರೆ ದೇಶ ಟರ್ಕಿಯು ಟೈಗ್ರಿಸ್ ಮತ್ತು ಯೂಫ್ರಟಿಸ್ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿದ್ದು, ಅದರಿಂದ ಹರಿಯುತ್ತಿದ್ದ ನೀರು ನಿಂತಿರುವುದೂ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ ಎಂದು ರೈತರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News