ಫರಂಗಿಪೇಟೆ: ಮನೆ, ಆಸ್ಪತ್ರೆಯಲ್ಲಿ ಕಳ್ಳತನ; ಸೊತ್ತು ಕಳವು

Update: 2018-07-06 17:05 GMT

ಫರಂಗಿಪೇಟೆ, ಜು. 6: ಪುದು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸುಜೀರ್ ನಲ್ಲಿ ಕಳೆದ ರಾತ್ರಿ ಕಿಟಕಿಯ ರಾಡನ್ನು ಬಗ್ಗಿಸಿ ಒಳಗೆ ನುಗ್ಗಿದ ದುಷ್ಕರ್ಮಿಗಳು ಸುಮಾರು 20 ಸಾವಿರ ಮೌಲ್ಯದ ಲ್ಯಾಪ್ ಟ್ಯಾಪ್ ಮತ್ತು  ನಗದು  ಕಳವುಮಾಡಿದ್ದಾರೆ.

ಆಸ್ಪತ್ರೆಯ ಗ್ಲುಕೋಸ್ ಕೊಠಡಿ, ಚುಚ್ಚು ಮದ್ದಿನ ಕೊಠಡಿ, ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು  ವೈದ್ಯಾಧಿಕಾರಿ ಡಾ. ಸುದರ್ಶನ್ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಮೆಮಾರ್: ಪುದು ಗ್ರಾಮದ ಅಮೆಮಾರ್ ಎಂಬಲ್ಲಿ ಹುಸೈನ್ ಎಂಬವರ  ಮನೆಗೆ  ನುಗ್ಗಿದ ಕಳ್ಳರು ಮನೆಯ ಬಚ್ಚಲು ಕೋನೆಯಲ್ಲಿದ್ದ ಹಿತ್ತಲೆಯ ಹಂಡೆ ಮತ್ತು ತೋಟದಲ್ಲಿದ್ದ ನೀರು ಎಳೆಯುವ ಮೋಟಾರನ್ನು ಕಳವುಗೈದಿದ್ದಾರೆ. ಈ ಸಂಬಂಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News