ಮಿತ್ತೂರು: ರಸ್ತೆಗೆ ಮರ ಬಿದ್ದು ಮಾಣಿ-ಮೈಸೂರು ರಾ.ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ

Update: 2018-07-08 07:51 GMT

ಪುತ್ತೂರು, ಜು.8: ಕಳೆದ 3 ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಿತ್ತೂರು ಎಂಬಲ್ಲಿ ಮರವೊಂದು ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.

ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಕೆಲ ತಾಸು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮೈಸೂರು ಕಡೆ ಸಂಚರಿಸುವ ವಾಹನಗಳು ಕಲ್ಲಡ್ಕದಿಂದ ವಿಟ್ಲಕ್ಕೆ ಬಂದು ಪುತ್ತೂರು ರಸ್ತೆಯಾಗಿ ಅಥವಾ ಮಾಣಿಯಿಂದ ಪೇರಮೊಗ್ರುವಿಗೆ ಬಂದು ಕೆದಿಲ ರಸ್ತೆಯಾಗಿ ಪುತ್ತೂರಿಗೆ ಸಂಚರಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News