×
Ad

ಪ್ರಣವ್ ಮುಖರ್ಜಿ ಆಹ್ವಾನಿಸಲು ನಮಗೆ ಯಾವುದೇ ಹಿಂಜರಿಕೆ ಇರಲಿಲ್ಲ: ಮೋಹನ್ ಭಾಗವತ್

Update: 2018-07-08 21:57 IST

ನಾಗಪುರ, ಜು. 8: ಎಲ್ಲ ಆದರ್ಶಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಪರಿಗಣಿಸಲಿದ್ದು, ಆದುದರಿಂದಲೇ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆಹ್ವಾನಿಸಲು ನಮಗೆ ಯಾವುದೇ ಹಿಂಜರಿಕೆ ಆಗಲಿಲ್ಲ ಎಂದು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಹೇಳಿದ್ದಾರೆ. ‘‘ಪಕ್ಷದೊಂದಿಗೆ ಇದ್ದಾಗ, ಅವರು ಕಾಂಗ್ರೆಸ್‌ಗೆ ಸೇರಿದವರು. ಆದರೆ, ಅವರು ದೇಶದ ರಾಷ್ಟ್ರಪತಿ ಆದಾಗ, ಇಡೀ ದೇಶಕ್ಕೆ ಸೇರಿದವರು’’ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

‘‘ಅವರನ್ನು ಆಹ್ವಾನಿಸಲು ನಮಗೆ ಯಾವುದೇ ಹಿಂಜರಿಕೆ ಉಂಟಾಗಲಿಲ್ಲ. ಬರಲು ಅವರಿಗೆ ಕೂಡ ಯಾವುದೇ ಹಿಂಜರಿಕೆ ಆಗಲಿಲ್ಲ. ನಾವೆಲ್ಲರೂ ಒಂದೇ ದೇಶಕ್ಕೆ ಸೇರಿದವರು, ನಮ್ಮ ನಡುವೆ ಆತ್ಮೀಯತೆ ಇರಬೇಕು’’ ಎಂದು ಅವರು ಹೇಳಿದ್ದಾರೆ. ಕಳೆದ ತಿಂಗಳು ತನ್ನ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಲು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಆರೆಸ್ಸೆಸ್ ಆಹ್ವಾನ ನೀಡಿತ್ತು. ಈ ಆಹ್ವಾನವನ್ನು ಪ್ರಣವ್ ಮುಖರ್ಜಿ ಅವರು ಸ್ವೀಕರಿಸಿದ್ದರು. ಇದು ಹಲವರ ಹುಬ್ಬೇರುವಂತೆ ಮಾಡಿತ್ತು. ಕಾಂಗ್ರೆಸ್ ನಾಯಕರು ಮಖರ್ಜಿ ಅವರ ನಿರ್ಧಾರವನ್ನು ಟೀಕಿಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ‘ಪ್ರೇರಣಾ ವಿದ್ಯಾರ್ಥಿ ಸಮ್ಮೇಳನ’ದಲ್ಲಿ ಮೋಹನ್ ಭಾಗವತ್ ಮಾತನಾಡಿದರು. ಈ ಸಂದರ್ಭ ಎಬಿವಿಪಿಯ ಸ್ಥಾಪಕ ದಿ. ದತ್ತಾಜಿ ದಿದೋಲ್ಕರ್ ಅವರ ಬದುಕಿನ ಕುರಿತ ಪುಸ್ತಕ ಬಿಡುಗಡೆಗೊಳಿ ಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News