ನೂಡಲ್ಸ್ ತಿಂದು 9 ಮಕ್ಕಳು ಅಸ್ವಸ್ಥ

Update: 2018-07-08 17:13 GMT

ಛತ್ತರ್ ಪುರ, ಜು.8: ಅಂಗಡಿಯೊಂದರಿಂದ ಖರೀದಿಸಿದ ನೂಡಲ್ಸ್ ತಿಂದ ನಂತರ 9 ಮಕ್ಕಳು ಅಸ್ವಸ್ಥರಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಕ್ಕಳ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ತಕ್ಷಣ ಅವರನ್ನು ಗ್ವಾಲಿಯರ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.

"ಮಕ್ಕಳು 5 ರೂಪಾಯಿಯ 8 ಮ್ಯಾಗಿ ನೂಡಲ್ಸ್ ಪ್ಯಾಕೆಟ್ ಗಳನ್ನು ಖರೀದಿಸಿದ್ದರು. ಆದರೆ ಅದನ್ನು ತಿಂದ ನಂತರ ಅವರ ವರ್ತನೆ ಬದಲಾಯಿತು. ಛತ್ತರ್ ಪುರದ ಸ್ಥಳೀಯ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಇಲ್ಲದ ಕಾರಣ ಗ್ವಾಲಿಯರ್ ಮೆಡಿಕಲ್ ಕಾಲೇಜಿಗೆ ಮಕ್ಕಳನ್ನು ದಾಖಲಿಸಿದೆವು" ಎಂದು ಮಗುವೊಂದರ ತಂದೆ ರಾಮ್ ಕಿಶನ್ ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ನೆಸ್ಲೆ ಇಂಡಿಯಾ ನಿರಾಕರಿಸಿದೆ. ಮಕ್ಕಳು ಖರೀದಿಸಿದ ಉತ್ಪನ್ನ ನೆಸ್ಲೆಯದ್ದಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News