ನೆಲ್ಯಾಡಿ: ಮರ್ಕಝ್ ದಾರುರ್ರಹ್ಮ ಇಸ್ಲಾಮಿಕ್ ಅಕಾಡಮಿ ಉದ್ಘಾಟನೆ

Update: 2018-07-09 05:19 GMT

ಉಪ್ಪಿನಂಗಡಿ, ಜು.9: ನೆಲ್ಯಾಡಿಯ ದೋಂತಿಲದಲ್ಲಿ ಮರ್ಕಝ್ ದಾರುರ್ರಹ್ಮ ಇಸ್ಲಾಮಿಕ್ ಅಕಾಡಮಿ ಶನಿವಾರ ಉದ್ಘಾಟನೆಗೊಂಡಿತು.

ದಾರುರ್ರಹ್ಮಾ ಗಾರ್ಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಅಕಾಡಮಿಯನ್ನು ಉಸ್ಮಾನ್ ಜೌಹರಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಅಸ್ಸೈಯದ್ ಸಲೀಂ ಅಸ್ಸಖಾಫತ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ಅಕಾಡಮಿ ವತಿಯಿಂದ ನೂತನವಾಗಿ ಆರಂಭಿಸಲಾದ ನ್ಯೂಬಿ ಕುರ್‌ಆನಿಕ್ ಸ್ಕೂಲ್ ಉದ್ಘಾಟನೆ ಹಾಗೂ ಬದ್‌ರ್ ವೌಲಿದ್ ಕಾರ್ಯಕ್ರಮ ನಡೆಯಿತು.

ಹಂಝ ಮದನಿ ಮಿತ್ತೂರು ಮುಖ್ಯ ಭಾಷಣ ಮಾಡಿದರು. ಮನ್ಸೂರ್ ಮುಹೀನ್‌ಮಕ್ಕಳ ಪೋಷಕರಿಗೆ ಶಿಬಿರ ನಿರ್ವಹಿಸಿದರು.

ಸಮಾರಂಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್‌ ಬಗ್ಗುಮೂಲೆ, ನ್ಯಾಯವಾದಿ ಇಸ್ಮಾಯೀಲ್ ನೆಲ್ಯಾಡಿ, ನೆಲ್ಯಾಡಿ ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಹಮೀದ್, ಕೌಕ್ರಾಡಿ ಗ್ರಾಮ ಪಂಚಾಯತ್‌ಸದಸ್ಯ ಹನೀಫ್ ಕರಾವಳಿ, ಹಾಜಿ ಇಸ್ಮಾಯೀಲ್ ಕೋಲ್ಪೆ, ಸಂಸ್ಥೆಯ ಉಪ ಕಾರ್ಯದರ್ಶಿ ಎನ್.ಕೆ.ಇಸ್ಮಾಯೀಲ್, ನೆಲ್ಯಾಡಿಯ ನುಸ್ರತುಲ್ ಮಸಾಕೀನ್ ಅಸೋಸಿಯೇಶನ್ ಅಧ್ಯಕ್ಷ ಅಶ್ರಫ್ ಸಿ.ಎಂ., ನೆಲ್ಯಾಡಿ ಮಸೀದಿಯ ಮಾಜಿ ಅಧ್ಯಕ್ಷರಾದ ಎನ್.ಎಸ್.ಸುಲೈಮಾನ್, ಉದ್ಯಮಿ ತಾಜ್, ಸಮೀರ್ ಸಅದಿ ಮೊದಲಾದವರು ಉಪಸ್ಥಿತರಿದ್ದರು.

ಮುಸ್ತಫ ಪಟ್ಟೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News