ಜೈಲಿನಲ್ಲಿರುವ ಬಜರಂಗದಳ ನಾಯಕರನ್ನು ಕೇಂದ್ರ ಸಚಿವರು ಭೇಟಿಯಾದದ್ದು ಸರಿಯಲ್ಲ ಎಂದ ನಿತೀಶ್ ಕುಮಾರ್

Update: 2018-07-09 13:42 GMT

ಹೊಸದಿಲ್ಲಿ, ಜು.9: ರಾಮನವಮಿ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಬಜರಂಗದಳ ನಾಯಕರನ್ನು ಭೇಟಿಯಾದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ರ ಕ್ರಮ ಒಪ್ಪುವಂತಹದ್ದಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಭಂಗ ತರುವ ಯಾವುದೇ ಪ್ರಯತ್ನಗಳನ್ನು ಸರಕಾರವು ಸಹಿಸುವುದಿಲ್ಲ ಎಂದವರು ಹೇಳಿದರು. ಕಳೆದ ವರ್ಷ ನಡೆದ ಗಲಭೆ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಬಜರಂಗದಳದ ನಾಯಕರನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಭೇಟಿಯಾಗಿದ್ದರು.

ನಂತರ ಜೈಲಿನಲ್ಲಿರುವವರ ಮನೆಗೂ ಅವರು ಭೇಟಿ ನೀಡಿದ್ದರು. ಹಿಂದೂಗಳನ್ನು ಹಣಿಯಲು ಪ್ರಯತ್ನ ನಡೆಯುತ್ತಿದೆ ಎಂದವರು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, "ಇದು ಒಪ್ಪುವಂತಹದ್ದಲ್ಲ.  ಒಬ್ಬರಿಗೆ ಯಾವುದಾದರೂ ವಿಷಯದ ಬಗ್ಗೆ ಏನಾದರೂ ಅಭಿಪ್ರಾಯವಿರಬಹುದು ಹಾಗು ಎಲ್ಲಿ ಬೇಕಾದರೂ ಅದನ್ನು ವ್ಯಕ್ತಪಡಿಸಬಹುದು. ಆದರೆ ಆಡಳಿತವು ತಪ್ಪಿತಸ್ಥರೆಂದು ಘೋಷಿಸಿದವರಿಗೆ ಬಹಿರಂಗವಾಗಿ ಕರುಣೆ ತೋರಿಸುವುದು ಸರಿಯಲ್ಲ. ಯಾರನ್ನಾದರೂ ತಪ್ಪಾಗಿ ಬಂಧಿಸಿದ್ದಲ್ಲಿ ಆ ಬಗ್ಗೆ ಕೋರ್ಟ್ ಗೆ ಹೋಗಲಿ" ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News