‘ಅಮ್ಮ’ ಸಂಘಟನೆಗೆ ದಿಲೀಪ್: ಈ ಬಗ್ಗೆ ಮೋಹನ್‌ಲಾಲ್ ಹೇಳಿದ್ದೇನು ?

Update: 2018-07-09 14:30 GMT

ಕೊಚ್ಚಿ, ಜು.9: ಸಿನೆಮಾ ನಟಿಯ ಅಪಹರಣ ಮತ್ತು ಲೈಂಗಿಕ ಹಿಂಸೆ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದಿಲೀಪ್ ನಿರಪರಾಧಿಯೆಂದು ಸಾಬೀತಾಗುವವರೆಗೆ ‘ಅಮ್ಮ’(ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್)ದಿಂದ ಹೊರಗುಳಿಯಲಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ, ನಟ ಮೋಹನ್‌ಲಾಲ್ ತಿಳಿಸಿದ್ದಾರೆ.

ಪತ್ರಕರ್ತರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೂನ್ 24ರಂದು ನಡೆದ ಸಂಘಟನೆಯ ಮಹಾಸಭೆಯಲ್ಲಿ ದಿಲೀಪ್‌ರನ್ನು ಮರಳಿ ಸೇರ್ಪಡೆಗೊಳಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು. ಆದರೆ ಈಗ ದಿಲೀಪ್ ಅವರೇ ಸಂಘಟನೆಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಮೋಹನ್‌ಲಾಲ್ ತಿಳಿಸಿದರು. ಮಹಾಸಭೆಯಲ್ಲಿ ಮಹಿಳಾ ಸಿನಿ ಕಲಾವಿದರ ಸಂಘಟನೆಯ ಯಾವ ಸದಸ್ಯೆಯೂ ಪಾಲ್ಗೊಂಡಿರಲಿಲ್ಲ ಎಂದ ಅವರು, ಆದರೂ ಯಾವುದೇ ವಿಷಯದ ಬಗ್ಗೆ ಮಹಿಳಾ ಕಲಾವಿದರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದ್ದೇವೆ ಎಂದರು. ಸಂಘಟನೆಯು ನಟಿಯ ಪರವಾಗಿಯೇ ಇರುತ್ತದೆ ಎಂದ ಅವರು, ದಿಲೀಪ್ ಕೂಡಾ ಈ ಪ್ರಕರಣದಲ್ಲಿ ಪರಿಶುದ್ಧರಾಗಿ ಹೊರಹೊಮ್ಮುತ್ತಾರೆ ಎಂದು ಆಶಿಸುವುದಾಗಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News