ಡ್ರೆಸ್ಸಿಂಗ್ ರೂಮ್ ನಲ್ಲಿ ಫುಟ್ಬಾಲ್ ಆಟಗಾರರ ಜೊತೆ ಕುಣಿದು ಕುಪ್ಪಳಿಸಿದ ಕ್ರೊವೇಷಿಯಾ ಅಧ್ಯಕ್ಷೆ

Update: 2018-07-09 17:31 GMT

ಮಾಸ್ಕೋ, ಜು.9: ಫಿಫಾ ಫುಟ್ಬಾಲ್ ವಿಶ್ವ ಕಪ್ 2018ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತಿಥೇಯ ರಷ್ಯಾ ವಿರುದ್ಧ ಕ್ರೊವೇಷಿಯ  4-3 ಅಂತರದಿಂದ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದು, ಕ್ರೊವೇಷಿಯ ಅಧ್ಯಕ್ಷೆ ಡ್ರೆಸ್ಸಿಂಗ್ ರೂಮ್ ನಲ್ಲಿ ಕುಣಿದು ಕುಪ್ಪಳಿಸಿದ ವಿಡಿಯೋ ವೈರಲ್ ಆಗಿದೆ.

ಕ್ರೊವೇಷಿಯಾದ ಪ್ರಪ್ರಥಮ ಮಹಿಳಾ ಅಧ್ಯಕ್ಷೆ  ಕೊಲಿಂಡಾ ಗ್ರಬರ್ ಕಿಟರೊವಿಕ್ ಪಂದ್ಯ ವೀಕ್ಷಿಸಿದ್ದು, ಪಂದ್ಯಾವಳಿಯುದ್ದಕ್ಕೂ ಆಟಗಾರರನ್ನು ಹುರಿದುಂಬಿಸಿದ್ದರು. ಕೊಲಿಂಡಾ ಅವರು ಫಿಫಾ ಅಧ್ಯಕ್ಷ ಗಿಯನ್ನಿ ಇನ್ಫಾಂಟಿನೋ ಅವರ ಪಕ್ಕದಲ್ಲಿ ಕುಳಿತಿದ್ದರೆ ಅವರ ಇನ್ನೊಂದು ಪಕ್ಕದಲ್ಲಿ ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆದೇವ್ ಆಸೀನರಾಗಿದ್ದರು.

1998ರ ನಂತರದ ತಮ್ಮ ಅತ್ಯುತ್ತಮ ಫಿಫಾ ಫುಟ್ಬಾಲ್ ಚಾಂಪಿಯನ್‍ಶಿಪ್ ಪ್ರದರ್ಶನಕ್ಕೆ ಕ್ರೊವೇಷಿಯಾ ತಂಡದ ಆಟಗಾರರು ಹಾಡೊಂದನ್ನು ಹಾಡಿದಾಗ ಅಧ್ಯಕ್ಷೆ ಕೂಡ ಅವರಲ್ಲೊಬ್ಬರಾಗಿ ಆಟಗಾರರ ಹೆಗಲ ಮೇಲೆ ತಮ್ಮ ಕೈಗಳನ್ನಿಟ್ಟು ಎಲ್ಲರ ಜತೆ ತಮ್ಮ ಸಂತಸ ಹಂಚಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News