ತಮಿಳುನಾಡು ವಿಧಾನ ಸಭೆಯಲ್ಲಿ ಲೋಕಾಯುಕ್ತ ಮಸೂದೆ ಮಂಡನೆ

Update: 2018-07-09 16:52 GMT

ಚೆನ್ನೈ, ಜು. 9: ರಾಜ್ಯ ಮಟ್ಟದ ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಲೋಕಾಯುಕ್ತ ಸ್ಥಾಪಿಸಲು ಸುಪ್ರೀಂ ಕೋರ್ಟ್ ನೀಡಿದ ಗಡುವಿಗೆ ಒಂದು ದಿನ ಇರುವಾಗಲೇ ತಮಿಳುನಾಡು ಸರಕಾರ ಸೋಮವಾರ ವಿಧಾನಸಭೆಯಲ್ಲಿ ಲೋಕಾಯುಕ್ತ ಮಸೂದೆ ಮಂಡಿಸಿದೆ.

ಲೋಕಾಯುಕ್ತ ರೂಪಿಸುವಲ್ಲಿನ ಪ್ರಗತಿಯ ಕುರಿತು ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ದಾವೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ 12 ರಾಜ್ಯಗಳಲ್ಲಿ ತಮಿಳುನಾಡು ಕೂಡ ಸೇರಿದೆ. ಮಸೂದೆ ಮಂಡಿಸದೇ ಇರುವುದಕ್ಕೆ ರಾಜ್ಯ ನೀಡಿದ ಪ್ರತಿಕ್ರಿಯೆಯನ್ನು ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ಜುಲೈ 10ರ ಒಳಗೆ ಲೋಕಾಯುಕ್ತ ಸ್ಥಾಪಿಸಬೇಕು ಎಂದು ತಮಿಳುನಾಡು ಸರಕಾರಕ್ಕೆ ನಿರ್ದೇಶಿಸಿತ್ತು. ಅಧಿವೇಶನದ ಕೊನೆಯ ದಿನವಾದ ಸೋಮವಾರ ಆಡಳಿತ ಸುಧಾರಣಾ ಸಚಿವ ಡಿ. ಜಯಕುಮಾರ್ ವಿಧಾನ ಸಭೆಯಲ್ಲಿ ಮಸೂದೆ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News