ರಾಷ್ಟ್ರೀಯ ಹಸಿರು ಮಂಡಳಿ ಅಧ್ಯಕ್ಷರಾಗಿ ನ್ಯಾಯಮೂರ್ತಿ ಎ.ಕೆ. ಗೋಯಲ್

Update: 2018-07-09 16:56 GMT

ಹೊಸದಿಲ್ಲಿ, ಜು. 9: ರಾಷ್ಟ್ರೀಯ ಹಸಿರು ಮಂಡಳಿಯ ಅಧ್ಯಕ್ಷರಾಗಿ ನ್ಯಾಯಮೂರ್ತಿ ಆದರ್ಶ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಜುಲೈ 6ರಂದು ನಿವೃತ್ತರಾದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಗೋಯಲ್ ಅವರು 5 ವರ್ಷಗಳಿಗೆ ಎನ್‌ಜಿಟಿಯ ಅಧ್ಯಕ್ಷರಾಗಿ ನಿಯೋಜಿತರಾಗಿದ್ದಾರೆ. 2014ರಲ್ಲಿ ರಾಷ್ಟ್ರೀಯ ಹಸಿರು ಮಂಡಳಿ ಆರಂಭವಾದ ಬಳಿಕ ಆಯ್ಕೆಯಾಗುತ್ತಿರುವ ಮೂರನೇ ಅಧ್ಯಕ್ಷ ಗೋಯಲ್. ಮೊದಲ ಅಧ್ಯಕ್ಷ ನ್ಯಾಯಮೂರ್ತಿ ಲೋಕೇಶ್ವರ್ ಸಿಂಗ್ ಪಂತಾ ಹಾಗೂ ಎರಡನೇ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತರ್ ಕುಮಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News