ಸಮಾಜ ಬದಲಾದಂತೆ, ಮೌಲ್ಯಗಳು ಬದಲಾಗುತ್ತವೆ: ಕಲಂ 377ರ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್

Update: 2018-07-10 15:32 GMT

ಹೊಸದಿಲ್ಲಿ, ಜು. 10: ‘‘ಸಮಾಜ ಬದಲಾದಂತೆ, ಮೌಲ್ಯಗಳು ಕೂಡ ಬದಲಾಗುತ್ತವೆ; 160 ವರ್ಷಗಳ ಹಿಂದೆ ಇದ್ದ ನೀತಿ ಇದು ನೀತಿ ಅಲ್ಲದೇ ಇರಬಹುದು.’’ ಎಂದು ಸಲಿಂಗ ಕಾಮವನ್ನು ಅಪರಾಧೀಕರಣಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ಸಂದರ್ಭ ಸರ್ವೋಚ್ಛ ನ್ಯಾಯಾಲಯ ಹೇಳಿತು.

ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ‘‘ಕಲಂ 377 ಒಬ್ಬನ ಮಾನವ ಹಕ್ಕನ್ನು ಉಲ್ಲಂಘಿಸುತ್ತದೆ. ಈ ಸಮಸ್ಯೆಯನ್ನು ಲೈಂಗಿಕ ಅಭಿಶಿಕ್ಷಣದ ಮೂಲಕ ಪರಿಹರಿಸಬಹುದು. ಲಿಂಗತ್ವದೊಂದಿಗೆ ಮಾಡಲು ಏನೂ ಇಲ್ಲ’’ ಎಂದಿದ್ದಾರೆ.

‘‘ಲಿಂಗತ್ವ ಹಾಗೂ ಲೈಂಗಿಕ ಅಭಿಶಿಕ್ಷಣದ ವಿಚಾರಗಳು ಎರಡೂ ಬೇರೆ ಬೇರೆ. ಈ ಎರಡು ವಿಚಾರಗಳನ್ನು ಒಂದರೊಳಗೊಂದು ಬೆರೆಸಬಾರದು. ಇದು ಆಯ್ಕೆಯ ಪ್ರಶ್ನೆ ಅಲ್ಲ’’ ಎಂದು ಮಾಜಿ ಅಟಾರ್ನಿ ಜನರಲ್ ಹೇಳಿದರು.

ಈ ನಡುವೆ ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಬಗ್ಗೆ ಕೇಂದ್ರ ಸರಕಾರ ಪ್ರತಿಕ್ರಿಯೆ ಸಲ್ಲಿಸಲಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ಇಬ್ಬರು ವಯಸ್ಕರ ನಡುವಿನ ಸಮ್ಮತಿಯ ಲೈಂಗಿಕತೆಯನ್ನು ಕಾನೂನು ಬಾಹಿರ ಎಂಬ 2013ರ ತೀರ್ಪಿನ ಕುರಿತು ವಿಚಾರಣೆ ನಡೆಸುತ್ತಿದ್ದ ಸಾಂವಿಧಾನಿಕ ಪೀಠ ತನ್ನ ಮಂಗಳವಾರದ ವಿಚಾರಣೆಯನ್ನು ಮುಂದೂಡುವಂತೆ ಕೋರಿ ಕೇಂದ್ರ ಸರಕಾರ ಸಲ್ಲಿಸಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ತಿರಸ್ಕರಿಸಿತ್ತು.

‘‘ಇದನ್ನು (ವಿಚಾರಣೆ) ಮುಂದೂಡಲು ಸಾಧ್ಯವಾಗಲಾರದು. ನಾವು ನಿಗದಿಯಾದ ದಿನದಂದೆ ವಿಚಾರಣೆ ನಡೆಸುತ್ತೇವೆ. ನೀವು ಏನು ಸಲ್ಲಿಸಲು ಬಯಸುತ್ತೀರೋ ಅದನ್ನು ವಿಚಾರಣೆ ವೇಳೆ ದಾಖಲಿಸಿ’’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಆರ್.ಎಫ್. ನಾರಿಮನ್, ಎಂ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ ಹಾಗೂ ಮಲ್ಹೋತ್ರ ಅವರನ್ನೊಳಗೊಂಡ ಪೀಠ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News