ಸಿರಿಯದಲ್ಲಿ ನೆಲೆಯೂರಲು ಇರಾನ್ ಸೇನೆಗೆ ಅವಕಾಶವಿಲ್ಲ: ಇಸ್ರೇಲ್

Update: 2018-07-10 15:47 GMT

ಜಿದ್ದಾ, ಜು. 10: ಸಿರಿಯದಲ್ಲಿ ನೆಲೆಯೂರಲು ಇಸ್ರೇಲ್ ಇರಾನ್ ಪಡೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಅವಿಗ್ಡರ್ ಲೀಬರ್‌ಮನ್ ಸೋಮವಾರ ಎಚ್ಚರಿಸಿದ್ದಾರೆ.

ಸಿರಿಯದ ಹಾಮ್ಸ್ ರಾಜ್ಯದಲ್ಲಿರುವ ಇರಾನ್ ಸೇನೆ ‘ಇಸ್ಲಾಮಿಕ್ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್’ನ ವಾಯುನೆಲೆಯೊಂದರ ಮೇಲೆ ಇನ್ನೊಂದು ದಾಳಿ ನಡೆಸಿದ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಸಿರಿಯ ಅಧ್ಯಕ್ಷ ಅಸ್ಸಾದ್‌ರ ಪಡೆಗಳು ಗೋಲನ್ ಹೈಟ್ಸ್ ಗಡಿ ವಲಯದತ್ತ ಮುನ್ನುಗ್ಗುತ್ತಿರುವಂತೆಯೇ, ಇಸ್ರೇಲ್ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಸಿರಿಯ ಮತ್ತು ಇಸ್ರೇಲ್ ನಡುವೆ 44 ವರ್ಷಗಳ ಹಿಂದೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟ ಒಪ್ಪಂದದಂತೆ, ಈ ಗಡಿ ವಲಯವು ಸೇನಾಮುಕ್ತ ವಲಯವಾಗಿದೆ.

ಈ ವಲಯಕ್ಕೆ ಸೇನೆ ಕಳುಹಿಸಲು ಇರಾನ್ ಮತ್ತು ಹಿಝ್ಬುಲ್ಲಾಕ್ಕೆ ಅಸ್ಸಾದ್ ಅನುಮತಿ ನೀಡಬಹುದು ಎಂಬ ಭೀತಿಯನ್ನು ಇಸ್ರೇಲ್ ವ್ಯಕ್ತಪಡಿಸಿದೆ. ಹೀಗಾದರೆ, ಗಡಿಯಲ್ಲಿ ಬೇರೂರಲು ಅವುಗಳಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂಬ ಕಳವಳ ಇಸ್ರೇಲ್‌ ಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News