ಜಪಾನ್ ಜಲಪ್ರಳಯ: ರಕ್ಷಣಾ ಸಿಬ್ಬಂದಿಯಿಂದ ಮನೆ-ಮನೆ ಶೋಧ

Update: 2018-07-10 16:08 GMT

ಟೋಕಿಯೊ, ಜು. 10: ಹಲವು ದಿನಗಳಿಂದ ಸುರಿದ ಭಾರೀ ಮಳೆ ಮತ್ತು ಪ್ರವಾಹದ ಬಳಿಕ, ಸಂತ್ರಸ್ತರ ಶೋಧಕ್ಕಾಗಿ ರಕ್ಷಣಾ ಸಿಬ್ಬಂದಿ ಮಂಗಳವಾರ ಮನೆ-ಮನೆ ಶೋಧ ಕೈಗೊಂಡಿದ್ದಾರೆ.

ಜಪಾನ್‌ನ ದಶಕಗಳ ಅವಧಿಯ ಇತಿಹಾಸದಲ್ಲೇ ಅತ್ಯಂತ ಭೀಕರ ಪ್ರಾಕೃತಿಕ ವಿಕೋಪದಲ್ಲಿ 156 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ವಾರ ಆರಂಭಗೊಂಡ ದಾಖಲೆಯ ಜಡಿಮಳೆ ಈಗ ನಿಂತಿದೆ. ಇದರ ಜೊತೆಗೇ ಇಳಿಯುತ್ತಿರುವ ಪ್ರವಾಹ ಮಟ್ಟವು ದೇಶದ ಪಶ್ಚಿಮ ಭಾಗದಲ್ಲಿ ಸಂಭವಿಸಿದ ಪ್ರಕೋಪದ ತೀವ್ರತೆಯನ್ನು ಜಗತ್ತಿಗೆ ತೆರೆದಿಡುತ್ತಿದೆ.

ಕುರಾಶಿಕಿ ನಗರದಲ್ಲಿ ಒಂದು ಹಂತದಲ್ಲಿ ಹಲವು ಜಿಲ್ಲೆಗಳನ್ನು ಪ್ರವಾಹ ಆವರಿಸಿತು ಹಾಗೂ ಜನರು ತಮ್ಮ ಮನೆಗಳ ಮೇಲ್ಛಾವಣಿಗಳಲ್ಲಿ ರಕ್ಷಣೆ ಪಡೆಯಬೇಕಾಯಿತು.

‘‘ಮನೆ-ಮನೆ ಶೋಧದ ವೇಳೆ ನಾವು ಪ್ರತಿ ಮನೆಯಲ್ಲೂ ತಪಾಸಣೆ ಮಾಡುತ್ತೇವೆ ಹಾಗೂ ಮನೆಗಳಲ್ಲಿ ಯಾರಾದರು ಸಿಕ್ಕಿ ಬಿದ್ದಿದ್ದಾರೆಯೇ ಎಂಬುದನ್ನು ನೋಡುತ್ತೇವೆ’’ ಎಂದು ಒಕಾಯಾಮ ರಾಜ್ಯದ ಸರಕಾರಿ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News