ಸುಳ್ಳು ಸುದ್ದಿ ತಡೆಯಲು 25 ಕೋಟಿ ಡಾ. ಹೂಡಿಕೆ: ಯೂಟ್ಯೂಬ್

Update: 2018-07-10 16:12 GMT

ಸ್ಯಾನ್‌ಫ್ರಾನ್ಸಿಸ್ಕೊ, ಜು. 10: ತನ್ನ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳು ಹರಡುವುದನ್ನು ತಡೆಯುವ ವಿಧಾನಗಳನ್ನು ಅನ್ವೇಷಿಸುವುದಕ್ಕಾಗಿ 25 ಮಿಲಿಯ ಡಾಲರ್ (ಸುಮಾರು 170 ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ಗೂಗಲ್ ಒಡೆತನದ ವೀಡಿಯೊ ಹಂಚಿಕೆ ತಾಣ ‘ಯೂಟ್ಯೂಬ್’ ಹೇಳಿದೆ.

ಯೂಟ್ಯೂಬ್ 180 ಕೋಟಿ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ.

ಸುಳ್ಳು ಸುದ್ದಿ (ಫೇಕ್ ನ್ಯೂಸ್)ಯೊಂದಿಗೆ ವ್ಯವಹರಿಸುವುದಕ್ಕಾಗಿ ಗೂಗಲ್ ಮಾರ್ಚ್‌ನಲ್ಲಿ ಜಾರಿಗೆ ತಂದ ‘ಗೂಗಲ್ ನ್ಯೂಸ್ ಇನಿಶಿಯೇಟಿವ್’ನ ಭಾಗವಾಗಿ ಈ ಹೂಡಿಕೆ ಮಾಡಲಾಗುವುದು.

‘‘ನೂತನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ಯೂಟ್ಯೂಬ್‌ನಲ್ಲಿ ಸುದ್ದಿಯ ಅನುಭವವನ್ನು ಸುಧಾರಿಸಲು ಹಾಗೂ ಹೊಸ ಸವಾಲುಗಳನ್ನು ಎದುರಿಸಲು ನಮಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜಗತ್ತಿನ ವಿವಿಧ ಭಾಗಗಳ ಸುದ್ದಿ ಸಂಘಟನೆಗಳು ಮತ್ತು ಪರಿಣತರೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ’’ ಎಂದು ಯೂಟ್ಯೂಬ್‌ನ ಚೀಫ್ ಪ್ರಾಡಕ್ಟ್ ಆಫಿಸರ್ ನೀಲ್ ಮೋಹನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News