ಅಮೆರಿಕ: ಹೆತ್ತವರೊಂದಿಗೆ 50 ಮಕ್ಕಳ ಸೇರ್ಪಡೆ

Update: 2018-07-10 16:15 GMT

ವಾಶಿಂಗ್ಟನ್, ಜು. 10: ನ್ಯಾಯಾಲಯದ ಆದೇಶದಂತೆ, ಟ್ರಂಪ್ ಆಡಳಿತವು ಮಂಗಳವಾರದ ಗಡುವಿನೊಳಗೆ 5 ವರ್ಷಕ್ಕಿಂತ ಕೆಳಗಿನ 50ಕ್ಕೂ ಅಧಿಕ ವಲಸಿಗ ಮಕ್ಕಳನ್ನು ಅವರ ಹೆತ್ತವರೊಂದಿಗೆ ಸೇರಿಸಲಾಗುವುದು ಎಂದು ಸರಕಾರಿ ಅಟಾರ್ನಿ ಸೋಮವಾರ ಹೇಳಿದ್ದಾರೆ.

ಹೆತ್ತವರು ಮತ್ತು ಮಕ್ಕಳು ಒಂದುಗೂಡಿದ ಬಳಿಕ ಕುಟುಂಬಗಳನ್ನು ಬಿಡುಗಡೆ ಮಾಡಲಾಗುವುದು.

 ಆದಾಗ್ಯೂ, ಹಲವಾರು ಕಾರಣಗಳ ಹಿನ್ನೆಲೆಯಲ್ಲಿ ಗಡುವಿನೊಳಗೆ ಎಲ್ಲ ಮಕ್ಕಳನ್ನು ಹೆತ್ತವರೊಂದಿಗೆ ಒಂದುಗೂಡಿಸಲು ಸಾಧ್ಯವಾಗುವುದಿಲ್ಲ ಎಂಬ ಇಂಗಿತವನ್ನೂ ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News