ಟ್ರಂಪ್ ವಿರುದ್ಧ ಮೊಕದ್ದಮೆ ದಾಖಲಿಸಿದ ಮಾಜಿ ಕಾರು ಚಾಲಕ

Update: 2018-07-10 16:46 GMT

ನ್ಯೂಯಾರ್ಕ್, ಜು. 10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನಗೆ ಹಲವು ವರ್ಷಗಳ ಕಾಲ ಓವರ್‌ಟೈಮ್ ಭತ್ತೆಯನ್ನೇ ಕೊಟ್ಟಿಲ್ಲ ಎಂದು ಅವರ ಮಾಜಿ ಕಾರು ಚಾಲಕ ಆರೋಪಿಸಿದ್ದಾರೆ ಹಾಗು ಟ್ರಂಪ್ ಉದ್ಯಮ ಗುಂಪಿನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

10 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಟ್ರಂಪ್ ತನಗೆ ನ್ಯಾಯೋಚಿತ ಸಂಬಳ ಏರಿಕೆ ಮಾಡಿಲ್ಲ ಹಾಗೂ ತನ್ನನ್ನು ಅವರು ಶೋಷಿಸಿದ್ದಾರೆ ಎಂದು ನೋಯಲ್ ಸಿಂಟ್ರಾನ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ನೋಯಲ್ 25ಕ್ಕೂ ಅಧಿಕ ವರ್ಷ ಟ್ರಂಪ್, ಅವರ ಕುಟುಂಬ ಮತ್ತು ಉದ್ಯಮಗಳಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. 2016ರಲ್ಲಿ ಟ್ರಂಪ್ ಅಮೆರಿಕದದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ನೋಯಲ್‌ರನ್ನು ಗುಪ್ತಚರ ಸಂಸ್ಥೆಯು ಕೆಲಸದಿಂದ ತೆಗೆದಿತ್ತು. ಬಳಿಕ ಅವರು ಭದ್ರತಾ ಸಿಬ್ಬಂದಿಯಾಗಿ ಸೇರ್ಪಡೆಗೊಂಡರು.

3,000ಕ್ಕೂ ಅಧಿಕ ಗಂಟೆಗಳ ಓವರ್‌ಟೈಮ್ ಭತ್ತೆ ಹಾಗೂ ತಾನು ಅನುಭವಿಸಿದ ‘ಹಾನಿ’ಗಾಗಿ ದಂಡ, ಪರಿಹಾರ ಮತ್ತು ಮೊಕದ್ದಮೆ ಖರ್ಚುಗಳನ್ನು ಟ್ರಂಪ್ ನೀಡಬೇಕೆಂದು ಸಿಂಟ್ರಾನ್ ನ್ಯಾಯಾಲಯವನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News