ಥಾಯ್ ಗುಹೆಯಲ್ಲಿ ಸಿಲುಕಿದ್ದ ಬಾಲಕರ ರಕ್ಷಣೆ: ಭಾರತಕ್ಕೆ ಧನ್ಯವಾದ ತಿಳಿಸಿದ ಥಾಯ್ಲೆಂಡ್

Update: 2018-07-12 13:28 GMT

ಪುಣೆ, ಜು.12: ಉತ್ತರ ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಎರಡು ವಾರಗಳಿಗೂ ಅಧಿಕ ದಿನಗಳ ಕಾಲ ಸಿಲುಕಿಕೊಂಡ ಫುಟ್ಬಾಲ್ ತಂಡದ ಕೋಚ್ ಮತ್ತು ಬಾಲಕರ ರಕ್ಷಣಾ ಕಾರ್ಯದಲ್ಲಿ ಸಹಾಯ ನೀಡಿದ ಭಾರತಕ್ಕೆ ಥಾಯ್ಲೆಂಡ್ ನ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿ ಅಪಿರತ್ ಸುಗೊಂಧಭಿರೊಂ ಕೃತಜ್ಞತೆ ಸಮರ್ಪಿಸಿದ್ದಾರೆ.

ಗುಹೆಯಲ್ಲಿನ ನೀರನ್ನು ಪಂಪ್ ಮಾಡಿ ಹೊರ ಹಾಕುವ ತಂತ್ರಜ್ಞಾನ ಭಾರತದ ಕಿರ್ಲೋಸ್ಕರ್  ಬ್ರದರ್ಸ್ ಲಿಮಿಟೆಡ್ ಬಳಿಯಿದೆಯೆಂದು ಭಾರತೀಯ ದೂತಾವಾಸದ ಅಧಿಕಾರಿಗಳು ಥಾಯ್ಲೆಂಡ್ ಅಧಿಕಾರಿಗಳಿಗೆ ತಿಳಿಸಿದ ನಂತರ ಕಂಪೆನಿಯು ಭಾರತ, ಥಾಯ್ಲೆಂಡ್ ಮತ್ತು ಇಂಗ್ಲೆಂಡ್ ನಲ್ಲಿನ ತನ್ನ ಕಚೇರಿಗಳಿಂದ ತಂಡಗಳನ್ನು ಕಳುಹಿಸಿತ್ತು.

ಈ ತಜ್ಞರು  ಬಾಲಕರು ಸಿಲುಕಿದ್ದ ಥಾಮ್ ಲುವಾಂಗ್ ಗುಹೆ ಹೊರಗಡೆಯಿದ್ದುಕೊಂಡು ತಮ್ಮ ನಿಪುಣ ಸಲಹೆಗಳನ್ನು ರಕ್ಷಣಾ ತಂಡಕ್ಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News