‘ಸೇಕ್ರೆಡ್ ಗೇಮ್’ ವಿರುದ್ಧ ಮತ್ತೊಂದು ಪ್ರಕರಣ ದಾಖಲು

Update: 2018-07-12 16:48 GMT

ಮುಂಬೈ, ಜು. 12: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂದು ಹೇಳಲಾಗಿರುವ ವೆಬ್ ಸರಣಿ ‘ಸೇಕ್ರೆಡ್ ಗೇಮ್’ನ ನಿರ್ಮಾಪಕರು, ನವಾಝುದ್ದೀನ್ ಸಿದ್ದೀಕಿ ಹಾಗೂ ಉನ್ನತ ಮಟ್ಟದ ಮಾಧ್ಯಮ ಸೇವಾ ಪೂರೈಕೆದಾರ ‘ನೆಟ್‌ಫ್ಲಿಕ್ಸ್’ ವಿರುದ್ಧ ಐಎನ್‌ಟಿಯುಸಿ (ಯೂತ್ ಇಂಡಿಯನ್ ನ್ಯಾಶನಲ್ ಟ್ರೇಡ್‌ಯೂನಿಯನ್)ನ ಅಧ್ಯಕ್ಷ ಸುರೇಶ್ ಶ್ಯಾಮಲ್ ಗುಪ್ತಾ ಬುಧವಾರ ಪ್ರಕರಣ ದಾಖಲಿಸಿದ್ದಾರೆ.

 ‘ಸೇಕ್ರೆಡ್ ಗೇಮ್’ ವಿರುದ್ಧ ದಾಖಲಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಆಲ್ ಇಂಡಿಯಾ ಸಿನಿ ವರ್ಕರ್ಸ್‌ ಅಸೋಶಿಯೇಶನ್ (ಎಐಸಿಡಬ್ಲುಎ)ನ ಅಧ್ಯಕ್ಷರೂ ಆಗಿರುವ ಗುಪ್ತಾ ಅವರು ಚೆಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರ ಕಾಂಗ್ರೆಸ್‌ನ ಪಶ್ಚಿಮಬಂಗಾಳದ ಕಾರ್ಯಕರ್ತ ‘ಸೇಕ್ರೆಡ್ ಗೇಮ್’ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ನವಾಝುದ್ದೀನ್ ಸಿದ್ದೀಕಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News