ಭಾರತವು ಅಸಹಿಷ್ಣು ಪ್ರಜಾಸತ್ತೆಯಾಗುವ ಅಪಾಯವಿದೆ: ಹಾಮಿದ್ ಅನ್ಸಾರಿ

Update: 2018-07-12 17:42 GMT

ಹೊಸದಿಲ್ಲಿ, ಜು.12: ಎರಡು ಅವಧಿಗೆ ಭಾರತದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿರುವ ಹಮೀದ್ ಅನ್ಸಾರಿ ಇದೇ ಮೊದಲ ಬಾರಿ ಬಹಿರಂಗವಾಗಿ ಮಾತನಾಡಿದ್ದು, ಭಾರತವು ಅಸಹಿಷ್ಣು ಪ್ರಜಾಸತ್ತೆಯಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಆಂಗ್ಲ ಮಾಧ್ಯವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನ್ಸಾರಿ ಈ ಹೇಳಿಕೆಯನ್ನು ನೀಡಿದ್ದಾರೆ. ಭಾರತದ ಮೂಲ ತತ್ವವೇ ಅಪಾಯದಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮೂಲ ವೌಲ್ಯಗಳ ಬಗ್ಗೆ ಮಾತನಾಡುವುದಾದರೆ, ನಮ್ಮದು ಬಹುತ್ವದ ಸಮಾಜವಾಗಿದ್ದು ಜಾತ್ಯತೀತವಾದಕ್ಕೆ ಮತ್ತು ನಮ್ಮ ಸಂವಿಧಾನದ ಮುನ್ನುಡಿಯಲ್ಲಿ ಪಟ್ಟಿ ಮಾಡಲಾಗಿರುವ ತತ್ವಗಳ ಸಾಕಾರಕ್ಕೆ ಬದ್ಧವಾಗಿದೆ ಎಂದು ಅನ್ಸಾರಿ ತಿಳಿಸಿದ್ದಾರೆ.

ಜನರನ್ನು ಹೆಚ್ಚು ದೇಶಭಕ್ತರು, ಕಡಿಮೆ ದೇಶಭಕ್ತರು ಎಂದು ಅಳೆಯುವುದು ಸರಿಯಲ್ಲ. ನಮ್ಮ ರಾಷ್ಟ್ರೀಯತೆಯನ್ನು ಭಾರತೀಯ ಸಂವಿಧಾನದಲ್ಲಿ ವಿವರಿಸಲಾಗಿದೆ. ಅದು ಎಲ್ಲರನ್ನೂ ಒಂದಾಗಿ ಕಾಣುತ್ತದೆ. ಆದರೆ ಅದು ಹಾಗಲ್ಲ, ದೇಶಭಕ್ತ ಎಂದರೆ ಹೀಗೆ ಇರಬೇಕು ಎಂದು ಹೇಳುವ ಮೂಲಕ ಜನರಲ್ಲಿ ಅಸಮಾನತೆ ಉಂಟು ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅನ್ಸಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News