​ಜು.15ರಂದು ಸಚಿವ ಯು.ಟಿ.ಖಾದರ್‌ಗೆ ಪೌರ ಸನ್ಮಾನ

Update: 2018-07-13 09:37 GMT

ಮಂಗಳೂರು, ಜು.13: ಉಳ್ಳಾಲ ಪೌರ ಸಮಿತಿಯ ವತಿಯಿಂದ ಜು.15ರಂದು ಸಂಜೆ 7ಕ್ಕೆ ಉಳ್ಳಾಲ ನಗರಸಭಾ ಮೈದಾನದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಅವರಿಗೆ ಪೌರ ಸನ್ಮಾನ ಆಯೋಜಿಸಲಾಗಿದೆ ಎಂದು ಸಮಿತಿ ಸಂಚಾಲಕ ರವೀಂದ್ರರಾಜ್ ಉಳ್ಳಾಲ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಳ್ಳಾಲ ನಗರಸಭೆ ಅಧ್ಯಕ್ಷ ಕೆ. ಹುಸೈನ್ ಕುಂಞಿಮೋನು ಅಧ್ಯಕ್ಷತೆ ವಹಿಸಲಿದ್ದು, ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಕಾರ್ಯಕ್ರಮ ಉದ್ಘಾಟಿಸುವರು. ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ಪೆರ್ಮನ್ನೂರು ನಿತ್ಯಾಧರ್ ಚರ್ಚ್ ಧರ್ಮಗುರು ಎಲಿಯಾಸ್ ಡಿಸೋಜ, ಮಂಗಳೂರು ಜಮಾಅತೆ ಇಸ್ಲಾಂ ಹಿಂದ್ ಅಧ್ಯಕ್ಷ ಮುಹಮ್ಮದ್ ಕುಂಞಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸುವರು ಎಂದು ಅವರು ಹೇಳಿದರು.

ಯು.ಟಿ. ಖಾದರ್ ಆರೋಗ್ಯ ಸಚಿವರಾಗಿದ್ದಾಗ ಉಳ್ಳಾಲ ನಗರಕ್ಕೆ ಆಧುನಿಕ ಸೌಲಭ್ಯವುಳ್ಳ ಆರೋಗ್ಯ ಕೇಂದ್ರ ಒದಗಿಸಿದ್ದಾರೆ. ಉಳ್ಳಾಲ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ್ದಾರೆ. ಇದೀಗ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಸಿಎಂ ಅವರ ಗಮನಸೆಳೆದು ಇದನ್ನು ಸರಿಪಡಿಸುವಂತೆ ಈ ವೇಳೆ ಖಾದರ್ ಅವರಿಗೆ ಮನವಿ ಸಲ್ಲಿಸಲಾಗುವುದು. ಉಳ್ಳಾಲದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಮನವಿ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪೌರ ಸಮಿತಿಯ ಸಂಚಾಲಕರಾದ ಮುಹಮ್ಮದ್ ಮೂಸಾ, ಯು.ಕೆ.ಯೂಸ್ು ಮೇಲಂಗಡಿ, ಅಯ್ಯೂಬ್ ಯು.ಪಿ. ಮಂಚಿಲ, ಯು.ಕೆ.ನಝೀರ್ ಕೋಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News