ಯುನಿವೆಫ್‌ನಿಂದ ಹಜ್ ತರಬೇತಿ ಶಿಬಿರ

Update: 2018-07-15 05:30 GMT

ಮಂಗಳೂರು, ಜು.15: ಯುನಿವೆಫ್ ಕರ್ನಾಟಕ ಇದರ ದ.ಕ. ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರವು ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಜು.11ರಂದು ಜರುಗಿತು.

ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹಜ್ ಹಾಗೂ ಉಮ್ರಾದ ವಿಧಿವಿಧಾನಗಳನ್ನು ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು. ವೇದಿಕೆಯಲ್ಲಿ ಯುನಿವೆಫ್ ಕಾರ್ಯದರ್ಶಿ ಯು.ಕೆ.ಖಾಲಿದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಹಜ್ ಕರ್ಮದಲ್ಲಿ ಪ್ರಸಕ್ತ ಇರುವ ಕೆಲವು ಸಮಸ್ಯೆಗಳಿಗೆ ವಿದ್ವಾಂಸರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಪರಿಹಾರವನ್ನು ಸೂಚಿಸಲಾಯಿತು.

ಈ ಸಂದರ್ದಲ್ಲಿ ಛಾಯಾಚಿತ್ರ ಪ್ರದರ್ಶನ ಮೂಲಕ ಹಜ್ ಕರ್ಮದ ವಿವಿಧ ಆಯಾಮಗಳನ್ನು ಹಾಜಿಗಳಿಗೆ ವಿವರಿಸಲಾಯಿತು. ಯುನಿವೆಫ್ ಜಿಲ್ಲಾಧ್ಯಕ್ಷ ಸೈಫುದ್ದೀನ್ ಕಿರಾಅತ್ ಪಠಿಸಿದರು. ಕಾರ್ಯಕ್ರಮ ಸಂಚಾಲಕ ಅಬ್ದುಲ್ಲಾ ಪಾರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News