ಮಡಿವಂತಿಕೆ ಬಿಟ್ಟು ಹೊರಬಂದಿದ್ದು ಶಿರೂರು ಸ್ವಾಮೀಜಿ ಸಾವಿಗೆ ಕಾರಣವಾಯಿತೇ: ಕೇಮಾರು ಶ್ರೀ ಶಂಕೆ

Update: 2018-07-19 07:34 GMT

ಉಡುಪಿ, ಜು.19: ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಮಡಿವಂತಿಕೆಯನ್ನು ಬಿಟ್ಟು ಹೊರಬಂದವರು. ಎಲ್ಲ ವರ್ಗದ ಬಡವರ್ಗದ ಜನರನ್ನು ಜಾತಿ-ಮತ ಮುಕ್ತವಾಗಿ ಪ್ರೀತಿ ಮಾಡುತ್ತಿದ್ದರು. ಅವರ ಸಾವಿಗೆ ಇದು ಕೂಡಾ ಕಾರಣ ಆಗಿರಬಹುದು ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲ ಸ್ವಾಮೀಜಿ ಶಂಕೆ ವ್ಯಕ್ತಪಡಿಸಿದ್ದಾರೆ.

ಮಣಿಪಾಲದ ಕೆಎಂಸಿ ಆಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರೂರು ಸ್ವಾಮೀಜಿ ಸಾಯುವಂತಹ ಯಾವುದೇ ಸಮಸ್ಯೆಯನ್ನು ಹೊಂದಿರಲಿಲ್ಲ. ಆದ್ದರಿಂದ ಅವರ ಸಾವಿನ ಬಗ್ಗೆ ಸರಕಾರ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಿರೂರು ಸ್ವಾಮೀಜಿ ಘನ ಆಹಾರವನ್ನು ಅಷ್ಟೇನು ಸೇವಿಸುತ್ತಿರಲಲ್ಲಿ. ಜ್ಯೂಸ್ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಮಠದ ವತಿಯಿಂದಲೇ ಆಹಾರ ಮಾಡಿಕೊಡಲಾಗುತ್ತಿತ್ತು. ಇದೀಗ ಅವರಿಗೆ ವಿಷ ಪ್ರಾಶನದ ಆಹಾರ ಕೊಟ್ಟಿದ್ದು ಯಾರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಶಿರೂರು ಸ್ವಾಮೀಜಿ ಆಪ್ತರಾಗಿದ್ದ ಕೇಮಾರು ಶ್ರೀ ಆಗ್ರಹಿಸಿದ್ದಾರೆ.

ಐದು ದಿನಗಳ ಹಿಂದೆ ನನ್ನೊಂದಿಗೆ ಮಾತನಾಡಿದ ಶಿರೂರು ಸ್ವಾಮೀಜಿ ಪಟ್ಟದ ದೇವರ ವಿಗ್ರಹಕ್ಕಾಗಿ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಬಗ್ಗೆ ಹೇಳಿದ್ದರು. ಪಟ್ಟದ ದೇವರ ವಿಚಾರವಾಗಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು. ವಿಠ್ಠಲ ಬೇಕು ಎಂದು ಅವರು ಕನವರಿಸುತ್ತಿದ್ದರು ಎಂದು ಕೇಮಾರು ಶ್ರೀ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News