ಕೋಡಿ ಬ್ಯಾರೀಸ್ ಪ್ರೌಢಶಾಲೆಯಲ್ಲಿ ‘ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಭಿಯಾನ’

Update: 2018-07-19 08:02 GMT

ಕುಂದಾಪುರ, ಜು.19: ಪ್ಲಾಸ್ಟಿಕ್ ನಿಷೇಧ ಜಾಥಾವನ್ನು ಕೋಡಿಯ ಹಾಜಿ ಕೆ.ಮೊಹಿದೀನ್ ಬ್ಯಾರಿ ಸ್ಮಾರಕ ಫ್ರೌಢಶಾಲೆಯಲ್ಲಿ ‘ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ.

ಪ್ಲಾಸ್ಟಿಕ್ ನಿಷೇಧ ಜಾಥಾವನ್ನು ವಿದ್ಯಾರ್ಥಿಗಳು ನಡೆಸಿದರು. ಎಂ. ಕೋಡಿಯಿಂದ ಚಕ್ರೇಶ್ವರಿ ದೇವಸ್ಥಾನದವರೆಗೆ ಜಾಥಾ ನಡೆಸಿ ವಿವಿಧ ಘೋಷಣೆಗಳೊಂದಿಗೆ ಪ್ರತಿಯೊಂದು ಅಂಗಡಿ ಮಾಲಕರಿಗೆ ಹೂವನ್ನು ನೀಡುವುದರ ಮೂಲಕ ಅವರಿಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಮನವರಿಕೆ ಮಾಡಲಾಯಿತು. ಅಲ್ಲದೆ ಕರಪತ್ರಗಳನ್ನು ನೀಡುವುದರ ಮೂಲಕ ಪ್ಲಾಸ್ಟಿಕ್ ಬಳಸದಂತೆ ಮನವೊಲಿಸುವ ಪ್ರಯತ್ನವನ್ನು ಮಾಡಲಾಯಿತು.

ಮುಖ್ಯ ಶಿಕ್ಷಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಶಿಕ್ಷಕರಾದ ಜಯಶೀಲ ಶೆಟ್ಟಿ, ಸಂತೋಷ್, ದೈಹಿಕ ಶಿಕ್ಷಕರಾದ ಇಲ್ಯಾಸ್, ಜೋಶಿಲಾ ಎಸ್. ಶೆಟ್ಟಿ ಸೋನಿಯಾ ಫೆರ್ನಾಂಡಿಸ್, ಸನ್ಮಾ ಶೆಟ್ಟಿ ಕಾರ್ಯಕ್ರಮದಲ್ಲಿ ಸಹಕರಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News