21-22: ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳಿಂದ ‘ಕಾಸ್’ ಕಾರ್ಯಕ್ರಮ

Update: 2018-07-20 11:44 GMT

ಮಂಗಳೂರು, ಜು.20: ನಗರದ ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳ ವತಿಯಿಂದ ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ನೆರವು ನೀಡಲು ಹಣ ಸಂಗ್ರಹಿಸುವ ‘ಕಾಸ್’ ಕಾರ್ಯಕ್ರಮ ಜು.21 ಮತ್ತು 22ರಂದು ನಡೆಯಲಿದೆ.

ಜು.21ರಂದು ಮಧ್ಯಾಹ್ನ ಬಳಿಕ ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸ್ಟಾಲ್‌ಗಳನ್ನು ಹಾಕಿ ಅದರಿಂದ ಬರುವ ಆದಾಯವನ್ನು ದಾನವಾಗಿ ಬಡವರಿಗೆ ನೀಡಲಾಗುವುದು. ತಿಂಡಿ ತಿನಿಸು, ಪೈಂಟಿಂಗ್, ಅಲಂಕಾರಿಕಾ ವಸ್ತುಗಳನ್ನು ಮಾರಾಟ ಮಾಡಲಾಗುವುದು. ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಸ್ ಇವೆಂಟ್ ಕೋ ಆರ್ಡಿನೇಟರ್ ಸುಹಾನ್ ಆಳ್ವ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜು.22ರಂದು ಸಂಜೆ 4ಕ್ಕೆ ನಗರದ ಫೋರಂ ಫಿಝಾ ಮಾಲ್‌ಬಲ್ಲಿ ಮೆಗಾ ಚಾರಿಟಿ ಇವೆಂಟ್ ಏರ್ಪಡಿಸಲಾಗಿದೆ. ಕನ್ನಡ ಸಿನೆಮಾ ನಟರಾದ ದಿಗಂತ್, ಪೂಜಾ ದೇವರಿಯಾ, ಬಿಜೆಪಿ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ದ.ಕ. ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಅತಿಥಿಯಾಗಿ ಭಾಗವಹಿಸುವರು.

ಅಲೋಶಿಯಸ್ ಪಿಯು ಕಾಲೇಜು ಪ್ರಾಂಶುಪಾಲ ಮೆಲ್ವಿನ್ ಮೆಂಡೋನ್ಸಾ ಅಧ್ಯಕ್ಷತೆ ವಹಿಸುವರು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಗ್ರಹವಾದ ಹಣವನ್ನು 25 ಮಂದಿ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಮೂಲಕ ನೀಡಲಾಗುವುದು. ಪಶ್ಚಿಮ್ ರಿಹಾಬ್ ವೃದ್ದಾಶ್ರಮ, ಡಿ ಮರ್ಸಿಡ್ ಅನಾಥಾಶ್ರಮಕ್ಕೆ ನೆರವು ನೀಡಲಾಗುವುದು ಎಂದರು.

ಕಾಸ್ ಇವೆಂಟ್ ಕೋ ಆರ್ಡಿನೇಟರ್ ಈಶ್ವರ್ ಶೆಟ್ಟಿ, ಮಹಮ್ಮದ್ ಶವಾಝ್, ಸ್ಟೂಡೆಂಟ್ ಕೋ ಆರ್ಡಿನೇಟರ್‌ಗಳಾದ ಪ್ರದ್ಯುಮ್ನ, ಮೆಹೆಕ್ ಪಿಂಟೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News